Friday, June 5, 2026
spot_imgspot_img
spot_imgspot_img

ಸಂಬಂಧಿಕರ ಮದುವೆ ಮುಗಿಸಿ ವಾಪಸ್ ಬರುವಾಗ ಬೈಕ್ ಅಪಘಾತ; ಪೊಲೀಸ್ ಪೇದೆ ಸೇರಿ ಇಬ್ಬರು ಮೃತ್ಯು- ಓರ್ವ ಗಂಭೀರ!

- Advertisement -
- Advertisement -

ಸಂಬಂಧಿಗಳ ಮದುವೆ ಮುಗಿಸಿ ವಾಪಸ್ ತೆರಳುತ್ತಿದ್ದಾಗ ಬೈಕ್ ಅಪಘಾತವಾಗಿ ಪೊಲಿಸ್ ಪೇದೆ ಸೇರಿ ಇಬ್ಬರು ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಸಿದ್ದರಬೆಟ್ಟ ಬಳಿ ನಡೆದಿದೆ.

ಮಹೇಶ್, ಚಂದ್ರಯ್ಯ ಸ್ಥಳದಲ್ಲೇ ಸಾವನ್ನಪ್ಪಿದ ದುರ್ದೈವಿಗಳು. ಮೃತ ಮಹೇಶ್‌ ಕೋಡಿಗೇನಹಳ್ಳಿ ಪೊಲೀಸ್ ಠಾಣೆಯ ಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದರು. ನಿನ್ನೆ ಮೂವರು ತಡರಾತ್ರಿ ಒಂದೇ ಬೈಕ್‌ನಲ್ಲಿ ಸಂಬಂಧಿಗಳ ಮದುವೆಗೆ ಬಂದಿದ್ದು,. ಮದುವೆ ಮುಗಿಸಿ ವಾಪಸ್ ಊರಿನತ್ತ ತೆರಳುತ್ತಿದ್ದರು. ಈ ವೇಳೆ ಬೈಕ್ ನಿಯಂತ್ರಣ ತಪ್ಪಿ ವೇಗದಲ್ಲಿದ್ದಾಗಲೇ ರಸ್ತೆ ಮೇಲೆ ಬಿದ್ದು ಅಪಘಾತ ನಡೆದಿದೆ. ಬೈಕ್‌ನಲ್ಲಿದ್ದ ತೀವ್ರ ಗಾಯಗೊಂಡಿದ್ದ ಭರತ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!