ಬಂಟ್ವಾಳ: ಬೈಕ್ ನಲ್ಲಿ ಹೋಗುತ್ತಿದ್ದ ಯುವಕನೊಬ್ಬನಿಗೆ ಇನ್ನೊಂದು ಬೈಕಿನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಅಪಘಾತ ನಡೆಸಿ ಹಲ್ಲೆ ನಡೆಸಿದ್ದು, ತಲವಾರ್ ನಲ್ಲಿ ಮತ್ತೆ ಹಲ್ಲೆಗೆ ಮುಂದಾಗಿದ್ದು, ಬಳಿಕ ಇತ್ತಂಡದ ನಡುವೆ ಹೊಡೆದಾಟ ನಡೆದ ಘಟನೆ ಸಜಿಪಮುನ್ನೂರು ಗ್ರಾಮದಲ್ಲಿ ಸಂಭವಿಸಿದೆ.
ಸಜಿಪ ಮುನ್ನೂರು ಗ್ರಾಮದ ನಿವಾಸಿ ಮಹಮ್ಮದ್ ಶರೀಫ (22) ಎಂಬಾತ ಬೈಕಿನಲ್ಲಿ ಮನೆಯಿಂದ ಆಲಾಡಿ ಮಸೀದಿ ರಸ್ತೆಯಲ್ಲಿ ಸಾಗುತ್ತಿದ್ದಾಗ ಎದುರಿನಿಂದ ಬಂದ ಪಲ್ಸರ್ ಬೈಕಿನಲ್ಲಿ ಬಂದ ಸವಾರ ಮತ್ತು ಸಹ ಸವಾರ ಶರೀಫ್ ಅವರ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಪರಿಣಾಮ ಶರೀಪ್ ಅವರು ಬೈಕ್ ಸಹಿತ ಕೆಳಗೆ ಬಿದ್ದಿದ್ದಾರೆ. ಡಿಕ್ಕಿ ಹೊಡೆದ ಮೋಟಾರ ಸೈಕಲಿನ ಸಹ ಸವಾರನು ನೆಲಕ್ಕೆ ಬಿದ್ದಿದ್ದಾನೆ. ಪಲ್ಸರ್ ಬೈಕಿನ ಸವಾರ ಶರೀಫ್ ಗೆ ಹಲ್ಲೆ ನಡೆಸಿದ್ದು, ಸಹಸವಾರ ತಲವಾರಿನಿಂದ ಶರೀಫ್ ಗೆ ಹಲ್ಲೆನಡೆಸಲು ಯತ್ನಿಸಿದಾಗ ಶರೀಫ್ ಹೆದರಿ ಮನೆಯ ಕಡೆಗೆ ಓಡಿಹೊಗಿದ್ದಾನೆ.
ಈ ಪ್ರಕರಣದ ಮುಂದುವರಿದ ಭಾಗವಾಗಿ ಮಹಮ್ಮದ್ ಶರೀಫ್ ನ ಬಗ್ಗೆ ಮಾಹಿತಿ ನೀಡಿದ್ದಾನೆ ಎಂದು ಆರೋಪಿಸಿ ಸಜಿಪ ಮುನ್ನೂರು ಗ್ರಾಮದ ನಿವಾಸಿ ನವೀನ ಎಂಬಾತನಿಗೆ ಮಹಮ್ಮದ್ ಶರೀಫ, ಅನ್ಸಾರ್ ಮತ್ತು ಇತರ 10 ಮಂದಿ ಹಲ್ಲೆ ನಡೆಸಿದ್ದು, ಈ ಘಟನೆಯ ಬಗ್ಗೆ ಎರಡು ಪ್ರತ್ಯೇಕ ಪ್ರಕರಣಗಳು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.