- Advertisement -
- Advertisement -
ಬೆಳ್ತಂಗಡಿ: ಶನಿವಾರ ಜೈನ್ ಪೇಟೆ ಬಳಿ ವಾಹನ ತಪಾಸಣೆ ನಡೆಸಿದಾಗ, ಎರಡು ಬೈಕ್ ಗಳಲ್ಲಿ ಬಂದ ಮೂವರನ್ನು ವಿಚಾರಿಸಿದಾಗ ಅದು ಬೆಳ್ತಂಗಡಿ ಹಾಗೂ ಮೂಡಬಿದ್ರೆಯಲ್ಲಿ ಕಳವು ಮಾಡಿದ ಬೈಕ್ ಗಳೆಂದು ತಿಳಿದುಬಂದಿದೆ.
ಆರೋಪಿಗಳಾದ ಸುರತ್ಕಲ್ ನ ವಿಜಯ ಯಾನೆ ಆಂಜನೇಯ , ಮಂಗಳೂರಿನ ಪ್ರದೀಪ, ಬಂಟ್ವಾಳದ ಸುದೀಶ್ ಕೆ. ಕೆ., ಉಜಿರೆಯ ಪುಟ್ಟ ಯಾನೆ ಮೋಹನ ಹಾಗೂ ನಿತಿನ್ ಕುಮಾರ್ ಅವರನ್ನು ಬಂಧಿಸಲಾಗಿದೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಸಂದೇಶ್ ಪಿ. ಜಿ. ನೇತ್ರತ್ವದಲ್ಲಿ ಎಸ್. ಐ. ನಂದ ಕುಮಾರ್, ಶರತ್ ಕಮಾರ್
, ಎ. ಎಸ್. ಐ. ದೇವಪ್ಪ ತಿಲಕ್ ಮೊದಲಾದವರು ಪ್ರಕರಣ ಪತ್ತೆಯಲ್ಲಿ ಸಹಕರಿಸಿದ್ದಾರೆ.

- Advertisement -