- Advertisement -
- Advertisement -
ಎನ್.ಎಸ್.ಎಸ್ ಸ್ವಯಂ ಸೇವಕಿ ಸುರತ್ಕಲ್ ನ ಗೋವಿಂದ ದಾಸ ಕಾಲೇಜಿನ ವಿದ್ಯಾರ್ಥಿನಿ ಬಿಂದಿಯಾ ಎಲ್ ಶೆಟ್ಟಿ ಅವರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ NSS Awards For 2019 -20 ಪ್ರಶಸ್ತಿ ಸ್ವೀಕರಿಸಿದರು. ಆನ್ ಲೈನ್ ಮೂಲಕ ನಡೆದ ಈ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡರು.
ಬಿಂದಿಯಾ ಶೆಟ್ಟಿ ಕಳೆದ ಬಾರಿ ನವ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪೆರೆಡ್ ನಲ್ಲೂ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದರು. ಕಟ್ಲ ಲೀಲಾಧರ ಶೆಟ್ಟಿ ಮತ್ತು ಸುಜಾತ ಶೆಟ್ಟಿ ದಂಪತಿಗಳ ಪುತ್ರಿಯಾಗಿರುವ ಈಕೆ ಸದ್ಯ ಸಿ.ಎ ವ್ಯಾಸಂಗವನ್ನೂ ಮಾಡುತ್ತಿರುವ ಬಿಂದಿಯಾ ಶೆಟ್ಟಿ ಅನೇಕ ಸಂಘ ಸಂಸ್ಥೆಗಳಿ0ದಲೂ ಪ್ರಶಸ್ತಿ ಗೌರವಗಳನ್ನು ಪಡೆದಿದ್ದಾರೆ.
- Advertisement -