Saturday, May 18, 2024
spot_imgspot_img
spot_imgspot_img

ಮಂಗಳೂರು: ಏಳು ಕಾಗೆಗಳ ಕಳೇಬರ ಪತ್ತೆ-ಕರಾವಳಿಯಲ್ಲಿ ಹೆಚ್ಚಿದ ಹಕ್ಕಿ ಜ್ವರದ ಭೀತಿ

- Advertisement -G L Acharya panikkar
- Advertisement -

ಮಂಗಳೂರು: ನಗರದ ಹೊರವಲಯದಲ್ಲಿ ಸೋಮವಾರ ಮತ್ತೆ ಏಳು ಕಾಗೆಗಳ ಕಳೇಬರ ಪತ್ತೆಯಾಗಿದೆ.
ನಗರದ ಮಂಜನಾಡಿಯಲ್ಲಿ ಐದು ಕಾಗೆಗಳು ಸತ್ತು ಹಕ್ಕಿಜ್ವರದ ಆತಂಕ ಸೃಷ್ಟಿಯಾಗಿದ್ದ ಬೆನ್ನಲ್ಲೇ ಮತ್ತೆ ಏಳು ಕಾಗೆಗಳು ಸತ್ತಿರುವುದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಪಚ್ಚನಾಡಿಯಲ್ಲಿ ಮೂರು, ಶಕ್ತಿನಗರದಲ್ಲಿ ಎರಡು, ಕುಪ್ಪೆಪದವಿನಲ್ಲೂ ಎರಡು ಕಾಗೆಗಳು ಸತ್ತಿರುವುದು ಕಂಡುಬಂದಿದೆ.

ಪಶು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ತೆರಳಿದ ಅಧಿಕಾರಿಗಳು ಪರಿಶೀಲನೆ ನಡೆಸಿ ಕಾಗೆಗಳ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಪರೀಕ್ಷಾ ವರದಿಯಲ್ಲಿ ಹಕ್ಕಿಜ್ವರದ ಲಕ್ಷಣವಾದ ಆಂತರಿಕ ರಕ್ತಸ್ರಾವ ಇರುವುದು ಕಂಡುಬಂದಿಲ್ಲ ಎಂದು ತಿಳಿದುಬಂದಿದೆ.


ಶಕ್ತಿನಗರದ ಹೌಸಿಂಗ್ ಕಾಲನಿಯಲ್ಲಿ ಎರಡು ಕಾಗೆಗಳು ಮೃತಪಟ್ಟಿವೆ. ಕಾಗೆಗಳ ಮಾದರಿಯಲ್ಲಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. 3ರಿಂದ 5 ದಿನದೊಳಗೆ ವರದಿ ಬರುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

- Advertisement -

Related news

error: Content is protected !!