Wednesday, April 24, 2024
spot_imgspot_img
spot_imgspot_img

7 ವರ್ಷಗಳಿಂದ ಮಕ್ಕಳಿಲ್ಲ ಎಂದು ಕೊರಗುತ್ತಿರುವರಿಗೆ ಒಂದೇ ಬಾರಿ 5ಮಕ್ಕಳನ್ನು ಕರುಣಿಸಿದ ಭಗವಂತ

- Advertisement -G L Acharya panikkar
- Advertisement -
vtv vitla

ರಾಜಸ್ಥಾನ: 7 ವರ್ಷಗಳಿಂದ ಮಕ್ಕಳಿಲ್ಲ, ಕೊರಗುತ್ತಿದ್ದ ದಂಪತಿಗೆ ದೇವರು ಒಂದೇ ಬಾರಿ 5 ಮಕ್ಕಳನ್ನು ಕರುಣಿಸಿದ್ದಾನೆ.

ರಾಜಸ್ಥಾನದ ಕೌರಾಲಿ ಜಿಲ್ಲೆಯ ಮಸಲ್‌ಪುರದ ಪಿಪ್ರಾನಿ ಗ್ರಾಮದ ಅಶ್ಕ್‌ ಅಲಿ ಹಾಗೂ ರೇಷ್ಮಾ 7 ವರ್ಷಗಳ ಹಿಂದೆ ವಿವಾಹವಾಗಿದ್ದರು. ಆದರೆ ಈ ದಂಪತಿಗೆ ಮಕ್ಕಳಾಗಿರಲಿಲ್ಲ. ಹೀಗಾಗಿ ಹಲವು ಕಡೆ ಹರಕೆಗಳನ್ನು ಹೊತ್ತಿದ್ದರು, ದೇವರಲ್ಲಿ ನಮ್ಮ ಪ್ರಾರ್ಥನೆ ಮಡಿದ್ದರು.

ಇದಲ್ಲದೆ ಹಲವು ವೈದ್ಯರನ್ನು ಕೂಡ ಭೇಟಿಯಾಗಿದ್ದರು, ಆದರೂ ಏನೂ ಪ್ರಯೋಜನವಾಗಿರಲಿಲ್ಲ. 7 ವರ್ಷದ ಬಳಿಕ ರೇಷ್ಮಾ ಗರ್ಭವತಿಯಾಗಿದ್ದು, ಐದು ಆರೋಗ್ಯವಂತ ಮಕ್ಕಳಿಗೆ ಜನ್ಮ ನೀಡಿದ್ದಾರೆ. ರೇಷ್ಮಾ ಕರಾಲಿಯ ಖಾಸಗಿ ಆಸ್ಪತ್ರೆಯಲ್ಲಿ ಐವರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇವರಲ್ಲಿ ಇಬ್ಬರು ಗಂಡು ಮತ್ತು 3 ಹಣ್ಣು ಮಕ್ಕಳು.

ಈ ಬಗ್ಗೆ ಪ್ರತಿಕ್ರಿಯಿಸಿದ ವೈದ್ಯಾಧಿಕಾರಿ ಆಶಾ ಮೀನಾ ಇದು ನನ್ನ ಸರ್ವೀಸ್ ನಲ್ಲಿ ಹೊಸ ಅನುಭವ ಎಂದು ಹೇಳಿದ್ದು, ತಾಯಿಮತ್ತು ಮಕ್ಕಳು ಎಲ್ಲರೂ ಚೆನ್ನಾಗಿದ್ದಾರೆ ಎಂದು ತಿಳಿಸಿದ್ದಾರೆ.

- Advertisement -

Related news

error: Content is protected !!