Sunday, July 6, 2025
spot_imgspot_img
spot_imgspot_img

ಅಂಚೆ ಕಾರ್ಡ್ ಮಹಾ ಅಭಿಯಾನದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದ ನಳಿನ್‍ಕುಮಾರ್ ಕಟೀಲ್

- Advertisement -
- Advertisement -

ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕ ಕ್ಷೇತ್ರದಲ್ಲಿ ಕಳೆದ 20 ವರ್ಷಗಳಿಂದ ಸಲ್ಲಿಸುತ್ತಿರುವ ಸೇವೆಯನ್ನು ಅಭಿನಂದಿಸಲು ಸೆಪ್ಟೆಂಬರ್ 17ರಿಂದ ಅಕ್ಟೋಬರ್ 7ರವರೆಗೆ ಅಭಿನಂದನೆ, ಶುಭಾಶಯ ಪತ್ರ ಬರೆಯುವ ಪೋಸ್ಟ್​ ಕಾರ್ಡ್​ ಮಹಾ ಅಭಿಯಾನ ನಡೆಯುತ್ತಿದೆ. ಅಭಿಯಾನದ ಅಂಗವಾಗಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರಧಾನಿಗೆ ಶುಭಾಶಯ ಕೋರಿ ಅಂಚೆ ಕಾರ್ಡ್​ ಬರೆದರು.

‘ನಮ್ಮ ನೆಚ್ಚಿನ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಸಾದರ ವಂದನೆಗಳು ಮತ್ತು ಜನುಮದಿನದ ಹಾರ್ದಿಕ ಶುಭಾಶಯಗಳು. ತಮ್ಮ 20 ವರ್ಷದ ಅಧಿಕಾರಾವಧಿಯಲ್ಲಿ ಶೋಷಿತರ, ಹಿಂದುಳಿದ ವರ್ಗಗಳ, ಬಡವರ ಹಾಗೂ ಸರ್ವ ವರ್ಗದ ಪರ ಯೋಜನೆಗಳು- ಅಭಿವೃದ್ಧಿ ಪರವಾದ ಆಡಳಿತ, ಭ್ರಷ್ಟಾಚಾರರಹಿತ ಅಧಿಕಾರಾವಧಿ, ಅತ್ಯುತ್ತಮ ಆಡಳಿತ- ದಾಖಲೆಯ ಪ್ರಮಾಣದಲ್ಲಿ ಕೋವಿಡ್ ಲಸಿಕೆ ನೀಡುತ್ತಿರುವುದು ಅಭಿನಂದನೀಯ’ ಎಂದು ನಳಿನ್ ಕುಮಾರ್ ಕಟೀಲ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಭಾರತವನ್ನು ವಿಶ್ವಗುರುವನ್ನಾಗಿಸುವ ತಮ್ಮ ಮಹೋನ್ನತ ಸಂಕಲ್ಪ ಸಾಕಾರಗೊಳಿಸುವಂತಹ ಸೌಭಾಗ್ಯ- ಆಯುರಾರೋಗ್ಯವನ್ನು ತಾಯಿ ಭಾರತಾಂಬೆ ಕರುಣಿಸಲಿ ಎಂದು ಅವರು ಹಾರೈಸಿದ್ದಾರೆ.

ಪ್ರಧಾನಿ ಮೋದಿಗೆ 5 ಕೋಟಿ ಪೋಸ್ಟ್​ಕಾರ್ಡ್​ ಕಳಿಸಲಿರುವ ಬಿಜೆಪಿ
ಪ್ರಧಾನಿ ನರೇಂದ್ರ ಮೋದಿ ಅವರು ರಾಜಕೀಯದಲ್ಲಿ ಉನ್ನತ ಹುದ್ದೆಗೇರಿ 20 ವರ್ಷ ತುಂಬಿದ ಹಿನ್ನೆಲೆಯಲ್ಲಿ ಬಿಜೆಪಿಯು ಸೇವಾ ಮತ್ತು ಸಮರ್ಪಣ ಅಭಿಯಾನ (Seva and Samarpan Abhiyan) ಹಮ್ಮಿಕೊಂಡಿದೆ. ಸೆಪ್ಟೆಂಬರ್​ 17ರಂದು ಆರಂಭವಾಗಿರುವ ಈ ಅಭಿಯಾನವು 20 ದಿನಗಳ ಅವಧಿಗೆ, ಅಂದರೆ ಅಕ್ಟೋಬರ್ 7ರವರೆಗೆ ನಡೆಯಲಿದೆ.

ದೇಶಾದ್ಯಂತ ಬೂತ್​ಮಟ್ಟದಲ್ಲಿರುವ ಬಿಜೆಪಿ ಕಾರ್ಯಕರ್ತರು ಈ ಸಂದರ್ಭದಲ್ಲಿ ಸಕ್ರಿಯರಾಗಿ ನರೇಂದ್ರ ಮೋದಿಯವರಿಗೆ 5 ಕೋಟಿಗಳಷ್ಟು ಅಂಚೆಪತ್ರ (Postcard) ಕಳಿಸುವ ಮೂಲಕ ಅಭಿನಂದನೆ ಸಲ್ಲಿಸಲು ನಿರ್ಧರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ತಮ್ಮನ್ನು ತಾವು ಸಾರ್ವಜನಿಕ ಸೇವೆಗೆ ತೊಡಗಿಸಿಕೊಳ್ಳುವುದಲ್ಲದೆ, ಬಿಜೆಪಿ ಪಕ್ಷದ ಪ್ರತಿ ಸದಸ್ಯರೂ ತಮ್ಮನ್ನು ತಾವು ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹೀಗಾಗಿ ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸಲು 5 ಕೋಟಿ ಪೋಸ್ಟ್ ಕಾರ್ಡ್​ ಕಳಿಸಿಕೊಡಲಾಗುವುದು ಎಂದು ಬಿಜೆಪಿ ಹೇಳಿಕೆ ಬಿಡುಗಡೆ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿಯವರು 2001ರ ಅಕ್ಟೋಬರ್​ನಲ್ಲಿ ಮೊದಲ ಬಾರಿಗೆ ಗುಜರಾತ್​ ಮುಖ್ಯಮಂತ್ರಿಯಾದರು. ಅಲ್ಲಿಂದಲೂ ಅವರು ಪ್ರಮುಖ ಹುದ್ದೆಯನ್ನೇ ನಿಭಾಯಿಸುತ್ತ ಬಂದಿದ್ದಾರೆ. ಅವರು ರಾಜಕೀಯದ ಪ್ರಮುಖ ಹುದ್ದೆಯಲ್ಲಿ ಇದ್ದು, 20 ವರ್ಷ ಕಳೆದಿದೆ ಈ ಹಿನ್ನೆಲೆಯಲ್ಲಿ ಅಭಿಯಾನ ನಡೆಸಲಾಗುತ್ತಿದೆ ಎಂದು ಬಿಜೆಪಿ ಹೇಳಿತ್ತು.

driving
- Advertisement -

Related news

error: Content is protected !!