Thursday, July 3, 2025
spot_imgspot_img
spot_imgspot_img

ತನ್ನ ಪ್ರಿಯಕರನನ್ನು ಮರಳಿ ಪಡೆಯಬಹುದೆಂದು ಮಂತ್ರವಾದಿಯ ಮೊರೆ ಹೋಗಿ ಲಕ್ಷಾಂತರ ರೂ ಕಳೆದುಕೊಂಡ ಯುವತಿ

- Advertisement -
- Advertisement -

ತನ್ನನ್ನು ಬಿಟ್ಟು ಹೋದ ಪ್ರಿಯಕರನನ್ನು ವಾಪಸ್ ಪಡೆಯುವುದಕ್ಕಾಗಿ ಮಂತ್ರವಾದಿಯ ಮೊರೆ ಹೋದ ಯುವತಿಯೊಬ್ಬಳು 4.57 ಲಕ್ಷ ರೂ. ಕಳೆದುಕೊಂಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ಉತ್ತರಪ್ರದೇಶದ ಮೀರತ್ ಮೂಲದ ಬಾಬಾ ಕರೀಂ ಖಾನ್ ಬೆಂಗಾಲಿ ಅಲಿಯಾಸ್ ವಾಸಿಂ ಖಾನ್ ಎಂಬಾತನಿಗೆ ಖರ್ಗಾರ್‌ನ ನಿವಾಸಿಯಾಗಿರುವ 26 ವರ್ಷದ ಯುವತಿ ಹಣ ನೀಡಿ ಮೋಸಹೋಗಿದ್ದಾಳೆ.

ಯುವತಿ ಒಬ್ಬಾತನನ್ನು ಪ್ರೀತಿಸುತ್ತಿದ್ದಳು. ಅವನು ಆಕೆಯನ್ನು ಬಿಟ್ಟುಹೋಗಿದ್ದ. ಆತ ವಾಪಸ್ ತನ್ನ ಬಾಳಲ್ಲಿ ಬರಬೇಕು ಎಂದು ಕೋರಿದ್ದ ಯುವತಿಗೆ ಸಿಕ್ಕಿದ್ದು ಈ ಡೋಂಗಿ ಬಾಬಾ.

ಪ್ರಿಯಕರ ನಿನ್ನ ಬಳಿ ಓಡೋಡಿ ಬರುತ್ತಾನೆ. ನೀವಿಬ್ಬರೂ ಜೊತೆಯಾಗಿ, ಸುಂದರವಾದ ಜೀವನ ಸಾಗಿಸಬಹುದು ಎಂದು ಆಶ್ವಾಸನೆ ನೀಡಿದ್ದ ಬಾಬಾ, ಅದಕ್ಕಾಗಿ ವಿಶೇಷ ಪೂಜೆ ಮಾಡಿಕೊಡುವೆ ಎಂದು ಚೆನ್ನಾಗಿ ನಂಬಿಸಿ, ಆಕೆಯಿಂದ ಕಂತುಗಳಲ್ಲಿ 4.57 ಲಕ್ಷ ರೂ.ಗಳನ್ನು ವಸೂಲಿ ಮಾಡಿದ್ದಾನೆ.

ಆದರೆ ಶ್ರದ್ಧಾ, ಭಕ್ತಿಯಿಂದ ಪೂಜೆ ಮಾಡಿಸಿದ ಯುವತಿಯ ಬಳಿಗೆ ಪ್ರಿಯಕರನೂ ಬರಲಿಲ್ಲ. ಲಕ್ಷಾಂತರ ದುಡ್ಡು ವಾಪಸ್ಸಾಗಲಿಲ್ಲ. ಬಳಿಕ ಯುವತಿಗೆ ಮೋಸ ಹೋಗಿದ್ದು ತಿಳಿದು ಪೊಲೀಸರಿಗೆ ದೂರು ನೀಡಿದ್ದಾಳೆ.

ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ, ಈ ಬಾಬಾನ ಪೋಸ್ಟರ್ ನೋಡಿದ್ದ ಯುವತಿ ಬ್ಲ್ಯಾಕ್ ಮ್ಯಾಜಿಕ್ ಮಾಡಿ ತನ್ನ ಪ್ರಿಯಕರನನ್ನು ಮರಳಿ ಪಡೆಯಬಹುದೆಂದು ನಂಬಿ ಈತನ ಬಳಿ ಹೋಗಿರುವುದಾಗಿ ಹೇಳಿದ್ದಾಳೆ. ದುಡ್ಡನ್ನು ವಾಪಸ್ ಕೊಡುವಂತೆ ಸಂತ್ರಸ್ತೆ ಬಾಬಾ ಬಳಿ ಕೇಳಿದಾಗ, ಪೊಲೀಸರಿಗೆ ದೂರು ಕೊಟ್ಟಲ್ಲಿ ರಸ್ತೆ ಅಪಘಾತದಲ್ಲಿ ಸಾಯುವಂತೆ ಮಾಟ ಮಾಡುವುದಾಗಿ ಹೆದರಿಸಿದ್ದ ಎಂದು ದೂರಿನಲ್ಲಿ ವಿವರಿಸಿದ್ದಾಳೆ.

- Advertisement -

Related news

error: Content is protected !!