Thursday, April 25, 2024
spot_imgspot_img
spot_imgspot_img

ಐಪಿಎಲ್ 2021: ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಗೆ ಏಳು ವಿಕೆಟ್ ಗಳ ಭರ್ಜರಿ ಗೆಲುವು

- Advertisement -G L Acharya panikkar
- Advertisement -

ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 7 ವಿಕೆಟ್ ಗಳ ಗೆಲುವು ದಾಖಲಿಸಿದೆ.

ಗೆಲುವಿಗೆ 189 ರನ್ ಗುರಿ ಪಡೆದ ಡೆಲ್ಲಿ ತಂಡ ಶಿಖರ್ ದವನ್ ಮತ್ತು ಪೃಥ್ವಿ ಶಾ ಅವರು ಆಕರ್ಷಕ ಅರ್ಧ ಶತಕದ ಜತೆಯಾಟದಿಂದ 18.4 ಓವರ್ ಗಳಲ್ಲಿ 3 ವಿಕೆಟ್ ಗಳ ನಷ್ಟಕ್ಕೆ 190 ರನ್ ಗಳಿಸಿತು.

ಶಿಖರ್ ಧವನ್(85) ಹಾಗೂ ಪೃಥ್ವಿ ಶಾ(72) ಮೊದಲ ವಿಕೆಟ್ ಗೆ 13.3 ಓವರ್ ಗಳಲ್ಲಿ 138 ರನ್ ಗಳಿಸಿ ಭದ್ರ ಬುನಾದಿ ಹಾಕಿಕೊಟ್ಟರು.

ಶಾರ್ದೂಲ್ ಠಾಕೂರ್ 53 ರನ್ ಗೆ 2 ವಿಕೆಟ್ ವಿಕೆಟ್ ಗಳನ್ನು ಪಡೆದರು.

ಇದಕ್ಕೂ ಮೊದಲು ಬ್ಯಾಟಿಂಗ್ ಗೆ ಆಹ್ವಾನಿಸಲ್ಪಟ್ಟ ಚೆನ್ನೈ ತಂಡ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಸುರೇಶ್ ರೈನಾ(54) ಅರ್ಧಶತಕದ ಕೊಡುಗೆಯ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿತು.

driving
- Advertisement -

Related news

error: Content is protected !!