Wednesday, April 24, 2024
spot_imgspot_img
spot_imgspot_img

ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಹಾಗೂ ಯು.ಬಿ.ಟಿ ಹೆಲ್ಪ್ ಗೈಸ್ ಜಂಟಿ ಆಶ್ರಯದಲ್ಲಿ ಯಶಸ್ವಿ ರಕ್ತದಾನ ಶಿಬಿರ.

- Advertisement -G L Acharya panikkar
- Advertisement -

ಮಂಗಳೂರು: ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಹಾಗೂ ಯು.ಬಿ.ಟಿ ಹೆಲ್ಪ್ ಗೈಸ್ ಉಳಾಯಿಬೆಟ್ಟು ಇದರ ನೂತನ ಕಛೇರಿ ಉದ್ಘಾಟನೆಯ ಪ್ರಯುಕ್ತ ಇಂಡಿಯನ್ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ಮಂಗಳೂರು ಇದರ ಸಹಭಾಗಿತ್ವದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರವು ದಿನಾಂಕ 22 ನವಂಬರ್ 2020 ನೇ ಆದಿತ್ಯವಾರದಂದು ಜಿ.ಕೆ.ಬಿ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.

ಜನಾಬ್ಇಸ್ಮಾಯಿಲ್(ಅಧ್ಯಕ್ಷರು ಸಾಲೆ ಜುಮಾ ಮಸೀದಿ) ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮವನ್ನು ಜನಾಬ್:ಕಬೀರ್ ದಿಡ್ಡ್( ಉಪಾಧ್ಯಕ್ಷರು ಯು.ಬಿ.ಟಿ ಹೆಲ್ಪ್ ಗೈಸ್ ಉಳಾಯಿಬೆಟ್ಟು) ಉದ್ಘಾಟಿಸಿದರು.

ಯಶಸ್ವಿಯಾಗಿ ನಡೆದ ರಕ್ತದಾನ ಶಿಬಿರದಲ್ಲಿ ಎಲ್ಲಾ ಸುರಕ್ಷಿತಾ ಮುನ್ನೆಚ್ಚರಿಕೆಯನ್ನು ಪಾಲಿಸಿ ಕೊಂಡು ಒಟ್ಟು 102 ಮಂದಿ ರಕ್ತದಾನ ಮಾಡಿ ಜೀವದಾನಿಯಾದರು. ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ಇಂಡಿಯನ್ ರೆಡ್ ಕ್ರಾಸ್ ಬ್ಲಡ್ ಬ್ಯಾಂಕ್ ಮಂಗಳೂರು ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು.

ಮುಖ್ಯ ಅತಿಥಿಗಳಾಗಿ ಶ್ರೀ ಚೇತನ್ ಕೊಪ್ಪ, ಬಹು ಆರೀಫ್ ಬಾಖವಿ,ಅಯ್ಯೂಬ್ ಕನಿಬೆಟ್ಟು,ಮುಸ್ತಫಾ ಉಳಾಯಿಬೆಟ್ಟು,ಇಕ್ಬಾಲ್ ಎಸ್.ಎಂ.ಎ,ಇಕ್ಬಾಲ್ ಜಿ.ಕೆ.ಬಿ,ಅಬ್ದುಲ್ ರಹಿಮಾನ್,ಶರೀಫ್ ಕನಿಬೆಟ್ಟು ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಇದರ ಕಾರ್ಯ ನಿರ್ವಾಹಕರು ಉಪಸ್ಥಿತರಿದ್ದರು.

ರಕ್ತದಾನ ಮಾಡಿದ ಸರ್ವ ಸಹೃದಯೀ ದಾನಿಗಳಿಗೂ,ಆಸ್ಪತ್ರೆ ಸಿಬ್ಬಂದಿ ವರ್ಗಕ್ಕೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಉಳಾಯಿಬೆಟ್ಟುವಿನ ಜನಸ್ನೇಹಿ ನಾಗರಿಕರಿಗೂ ಹಾಗೂ ಕಾರ್ಯಕ್ರಮದ ಯಶಸ್ವಿಗಾಗಿ ದುಡಿದ ಎಲ್ಲಾ ಕಾರ್ಯಕರ್ತರಿಗೂ, ಮಾಧ್ಯಮ ಪ್ರತಿನಿಧಿಗಳಿಗೂ ಸಂಘಟಕರು ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಪರವಾಗಿ ಕೃತಜ್ಞತೆಯನ್ನು ತಿಳಿಸಿದ್ದಾರೆ.



- Advertisement -

Related news

error: Content is protected !!