Monday, June 30, 2025
spot_imgspot_img
spot_imgspot_img

ಬ್ಲೂಟೂತ್ ಇಯರ್ ಫೋನ್ ಸ್ಫೋಟಕ್ಕೆ ಯುವಕ ಸಾವು

- Advertisement -
- Advertisement -

ಜೈಪುರ: ಕಿವಿಯಲ್ಲಿದ್ದ ಬ್ಲೂಟೂತ್ ಇಯರ್ ಫೋನ್ ಸ್ಫೋಟಗೊಂಡು ಯುವಕನೋರ್ವ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಜೈಪುರ ಜಿಲ್ಲೆಯಲ್ಲಿ ನಡೆದಿದೆ. ಸಾವನ್ನಪ್ಪಿದ ಯುವಕನನ್ನು ಜೈಪುರದ ಉದಯ್​ಪುರ ಗ್ರಾಮದವನು ಎಂದು ಗುರುತಿಸಲಾಗಿದೆ.

ಯುವಕ ಬ್ಲೂಟೂತ್ ಇಯರ್​ಫೋನ್​ನ್ನು ಕಿವಿಗೆ ಸಿಕ್ಕಿಸಿಕೊಂಡು ವ್ಯಕ್ತಿಯೊಬ್ಬರ ಜೊತೆ ಮಾತನಾಡುವಾಗ ಇದ್ದಕ್ಕಿದ್ದಂತೆ ಇಯರ್​ ಫೋನ್ ಸ್ಫೋಟಗೊಂಡಿದೆ. ಇದರಿಂದ ಶಾಕ್ ಗೊಳಗಾದ ಯುವಕನಿಗೆ ಹೃದಯಾಘಾತವಾಗಿದ್ದು ತಕ್ಷಣವೇ ಆತನನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವಕ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ. ಇನ್ನು ಇಯರ್​ಫೋನ್ ಸ್ಫೋಟದಿಂದಾಗಿ ಯುವಕನ ಎರಡೂ ಕಿವಿಗಳು ಗಾಯಗೊಂಡಿವೆ.

- Advertisement -

Related news

error: Content is protected !!