Saturday, June 13, 2026
spot_imgspot_img
spot_imgspot_img

ರಾಹುಲ್‌ ಗಾಂಧಿ ತಮಿಳುನಾಡಿನ ಹುಡುಗಿಯನ್ನು ವರಿಸಲು ಸಿದ್ಧರಂತೆ..?!!!

- Advertisement -
- Advertisement -

ಇಲ್ಲೊಂದು ಟ್ವೀಟ್‌ ಸಖತ್ ಸದ್ದು ಮಾಡುತ್ತಿದೆ. ಸದಾ ಒಂದಲ್ಲೊಂದು ವಿಷಯದಲ್ಲಿ ಸುದ್ದಿಯಲ್ಲಿರುವ ರಾಹುಲ್ ಗಾಂಧಿ ಈಗ ಮದುವೆಯ ಸುದ್ದಿಯಲ್ಲಿದ್ದಾರೆ. ರಾಹುಲ್ ಗಾಂಧಿ ಅವರು ತಮಿಳುನಾಡನ್ನು ಪ್ರೀತಿಸುತ್ತಾರೆ. ಹೀಗಾಗಿ ಅವರು ತಮಿಳು ಹುಡುಗಿಯನ್ನು ಮದುವೆಯಾಗಲು ಸಿದ್ಧರಾಗಿದ್ದಾರೆ ಎಂದು ಮಹಿಳೆಯೊಬ್ಬರು ಹೇಳಿದ್ದಾರೆ. ಇದಕ್ಕೆ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಇದೊಂದು ಉಲ್ಲಾಸದ ಕ್ಷಣ ಎಂದು ಟ್ವೀಟ್‌ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಕೈಗೊಂಡಿರುವ ‘ಭಾರತ್ ಜೋಡೋ ಯಾತ್ರೆ’ ಭರದಿಂದ ಸಾಗುತ್ತಿದ್ದು, ತಮಿಳುನಾಡಿನಲ್ಲಿ ಈ ಯಾತ್ರೆ ಮೂರನೇ ದಿನಕ್ಕೆ ಕಾಲಿಟ್ಟಿದೆ. ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯ ಮಾರ್ತಾಂಡಂನಲ್ಲಿ ಮಹಿಳಾ ಎಂಜಿಎನ್‍ಆರ್‌ಇಜಿಎ ಕಾರ್ಯಕರ್ತರನ್ನು ಭೇಟಿಯಾದರು. ಈ ವೇಳೆ ಮಹಿಳೆಯೊಬ್ಬರು ರಾಹುಲ್ ಗಾಂದಿ ಅವರು ತಮಿಳುನಾಡನ್ನು ಪ್ರೀತಿಸುತ್ತಾರೆ. ಹೀಗಾಗಿ ತಮಿಳು ಹುಡುಗಿಯನ್ನು ಮದುವೆಯಾಗಲು ಸಿದ್ಧರಾಗಿದ್ದಾರೆಂದು ಹೇಳಿದ್ದಾರೆ. ಇದನ್ನು ಗಮನಿಸಿದ ಜೈರಾಮ್ ರಮೇಶ್ ಅವರು ಇದೊಂದು ‘ಉಲ್ಲಾಸದ ಕ್ಷಣ’ ಎಂದು ಹೇಳಿದ್ದಾರೆ.

ಜೈರಾಮ್ ರಮೇಶ್ ಅವರು ತಮ್ಮ ಟ್ವಿಟ್ಟರ್‌ನಲ್ಲಿ ರಾಹುಲ್ ಗಾಂಧಿ ಅವರ ಫೋಟೋವನ್ನು ಹಂಚಿಕೊಂಡಿದ್ದು, ಇಂದು ಮಧ್ಯಾಹ್ನ ಮಾರ್ತಾಂಡಂನಲ್ಲಿ ಮಹಿಳಾ ಎಂಜಿಎಎನ್‍ಆರ್‌ಇಜಿಎ ಕಾರ್ಯಕರ್ತರೊಂದಿಗೆ ರಾಹುಲ್ ಗಾಂಧಿಯವರು ಸಂವಾದ ನಡೆಸುತ್ತಿದ್ದರು. ಈ ವೇಳೆ ಮಹಿಳೆಯೊಬ್ಬರು ರಾಹುಲ್ ಗಾಂಧಿ ತಮಿಳುನಾಡನ್ನು ಪ್ರೀತಿಸುತ್ತಾರೆ ಎಂದು ತಿಳಿದಿದೆ ಮತ್ತು ಅವರು ತಮಿಳು ಹುಡುಗಿಯನ್ನು ಮದುವೆಯಾಗಲು ಸಿದ್ಧರಾಗಿದ್ದಾರೆ ಅಂತ ಹೇಳಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

astr
- Advertisement -

Related news

error: Content is protected !!