Friday, May 3, 2024
spot_imgspot_img
spot_imgspot_img

2022-23 ಕಟ್ಟಡ ಕಾರ್ಮಿಕ ಮಕ್ಕಳ ಶೈಕ್ಷಣಿಕ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

- Advertisement -G L Acharya panikkar
- Advertisement -

2022-23 ಕಟ್ಟಡ ಕಾರ್ಮಿಕ ಮಕ್ಕಳ ಶೈಕ್ಷಣಿಕ ವಿದ್ಯಾರ್ಥಿ ವೇತನದ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ. ಫೆಬ್ರವರಿ 6ರಂದು ನಡೆದ ಹೋರಾಟದ ಫಲವಾಗಿ ಈಗ ಅರ್ಜಿ ಸಲ್ಲಿಕೆ ಆರಂಭವಾಗಿದ್ದು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.

ಕಟ್ಟಡ ಕಾರ್ಮಿಕರ ಮಕ್ಕಳ ಸ್ಕಾಲರ್ ಶಿಪ್‌ಗೆ ಸಲ್ಲಿಸಬೇಕಾದ ದಾಖಲೆಗಳು

1 ರಿಂದ 9 ನೇ ತರಗತಿಯವರೆಗೆ ಬೇಕಾಗುವ ದಾಖಲೆಗಳು

  • ಕಳೆದ ವರ್ಷದ ಎಸ್.ಎಸ್.ಪಿ ಪೋರ್ಟಲ್ ನ ಅರ್ಜಿಯ ಪ್ರತಿ ಅಥವಾ ಕಾರ್ಮಿಕನ ಮಕ್ಕಳ Sats ID(ಸ್ಯಾಟ್ಸ್ ಐಡಿ)
  • ಕಾರ್ಮಿಕನ ಮಕ್ಕಳ ಆಧಾರ್ ಕಾರ್ಡ್‌ ತರಬೇಕು.
  • ಕಾರ್ಮಿಕನ ಆಧಾರ್ ಕಾರ್ಡ್ ಮತ್ತು ಕಾರ್ಮಿಕನ ಪತ್ನಿಯ ಆಧಾರ್ ಕಾರ್ಡ್ ತರಬೇಕು.
  • ಕಾರ್ಮಿಕನ ಬ್ಯಾಂಕ್‌ ಪಾಸ್ ಪುಸ್ತಕ ಮತ್ತು ಕಾರ್ಮಿಕನ ಆಧಾರ್ ಲಿಂಕ್ ಆದ ಮೊಬೈಲ್ ತರಬೇಕು.
  • ಎಲ್ಲಾ ಕಾರ್ಮಿಕ ಕಾರ್ಡ್ ತರಬೇಕು. (ರಿನಿವಲ್’ ಚಾಲ್ತಿಯಲ್ಲಿರಬೇಕು)
  • ಕಾರ್ಮಿಕನ ಮಕ್ಕಳ ಹೆಸರು ರೇಷನ್‌ ಕಾರ್ಡ್‌ಗೆ ಕಡ್ಡಾಯವಾಗಿ ಸೇರ್ಪಡೆಯಾಗಿರಬೇಕು.

10 ನೇ ತರಗತಿ, ಪಿಯುಸಿ, ಪದವಿ/ಸ್ನಾತಕೋತರ ವಿದ್ಯಾರ್ಥಿಗಳಿಗೆ ಬೇಕಾಗುವ ದಾಖಲೆಗಳು

  • SSLC, ಪಿಯುಸಿ, ಪದವಿ ವಿದ್ಯಾರ್ಥಿಗಳು SSLC ಅಂಕಪಟ್ಟಿ ತರಬೇಕು (Xerox copy)
  • ವಿದ್ಯಾರ್ಥಿ/ವಿದ್ಯಾರ್ಥಿನಿಯರ ಅಂಕಪಟ್ಟಿ ಹಾಗೂ ಈಗ ಓದುತ್ತಿರುವ ಕಾಲೇಜಿನ ಹೆಸರು, ಯುನಿವರ್ಸಿಟಿ, ರಿಜಿಸ್ಟರ್ ನಂಬರ್ ಇರಬೇಕು.
  • ಕಾರ್ಮಿಕನ ಮಕ್ಕಳ ಜಾತಿ, ಆದಾಯ ಪ್ರಮಾಣ ಪತ್ರ ತರಬೇಕು.
  • ವಿದ್ಯಾರ್ಥಿಯ ಆಧಾರ್ ಕಾರ್ಡ್ ಮತ್ತು ತಂದೆ ತಾಯಿಯ ಆಧಾರ್ ಕಾರ್ಡ್ ತರಬೇಕು
  • ಕಾರ್ಮಿಕನ ಬ್ಯಾಂಕ್ ಪಾಸ್ ಪುಸ್ತಕ ಮತ್ತು ಕಾರ್ಮಿಕನ ಆಧಾರ್‌ಗೆ ಲಿಂಕ್‌ ಆದ ಮೊಬೈಲ್ ತರಬೇಕು
  • ಎಲ್ಲಾ ಕಾರ್ಮಿಕ ಕಾರ್ಡ್ ತರಬೇಕು (ರಿನಿವಲ್ ಚಾಲ್ತಿಯಲ್ಲಿರಬೇಕು)
  • ಕಳೆದ ವರ್ಷದ ಎಸ್.ಎಸ್.ಪಿ ಪೋರ್ಟಲ್ ನ ಅರ್ಜಿಯ ಪ್ರತಿ ತರಬೇಕು
  • ಕಾರ್ಮಿಕನ ಮಕ್ಕಳ ಹೆಸರು ರೇಷನ್ ಕಾರ್ಡ್‌ಗೆ ಕಡ್ಡಾಯವಾಗಿ ಸೇರ್ಪಡೆಯಾಗಿರಬೇಕು.

ಭಾರತೀಯ ಮಜ್ದೂರ್ ಸಂಘ (BMS) ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಹಾಗೂ ಇತರ ನಿರ್ಮಾಣ ಕಾಮಗಾರಿ ಮಜ್ದೂರ್ ಸಂಘ ತಾಲೂಕು ಸಮಿತಿ ವಿಟ್ಲ. 9900336599 9019500637

ಸ್ಕಾಲರ್‌ಶಿಪ್‌ ಅರ್ಜಿ ಶೀಘ್ರವಾಗಿ ಬರಲು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾಮಗಾರಿ “ಭಾರತೀಯ ಮಜ್ದೂರ್ ಸಂಘ (ಬಿಎಂಎಸ್)” Vtv ಮೀಡಿಯಾ ಮೂಲಕ ತಿಳಿಸಲಾಗಿತ್ತು. ಫೆಬ್ರವರಿ 6 ರಂದು ನಡೆದ ಹೋರಾಟದ ಮನವಿ ಮುಖಾಂತರ ಈಗ ಸ್ಕಾಲರ್ಶಿಪ್ ಅರ್ಜಿ ಪ್ರಾರಂಭಗೊಂಡಿದೆ. ಈ ಸಂದರ್ಭದಲ್ಲಿ ಕೈಜೋಡಿಸಿದ ವಿ. ಟಿವಿ ಮೀಡಿಯಾ ಚಾನಲ್‌ನವರಿಗೆ ಭಾರತಿಯ ಮಜ್ದೂರ್ ಸಂಘ ಧನ್ಯವಾದಗಳು ತಿಳಿಸಿದೆ.

- Advertisement -

Related news

error: Content is protected !!