Sunday, June 29, 2025
spot_imgspot_img
spot_imgspot_img

ಬಾಡಿ ಬಿಲ್ಡಿಂಗ್‌ ಮೂಲಕ ಪ್ರಸಿದ್ಧರಾಗಿರುವ ಜೋ ಲಿಂಡ್ನರ್‌ ನಿಧನ

- Advertisement -
- Advertisement -

ಸೋಶಿಯಲ್‌ ಮೀಡಿಯಾದಲ್ಲಿ ಬಾಡಿ ಬಿಲ್ಡಿಂಗ್‌ ಮೂಲಕ ಪ್ರಸಿದ್ಧರಾಗಿರುವ ಜೋ ಲಿಂಡ್ನರ್‌ 30ನೇ ವಯಸ್ಸಿಗೆ ನಿಧನರಾಗಿದ್ದಾರೆ.

ಜೋ ಲಿಂಡ್ನರ್ ಥಾಯ್‌ಲ್ಯಾಂಡ್‌ನಲ್ಲಿ ವೇಟ್ ಲಿಫ್ಟಿಂಗ್ ಹಾಗೂ ಬಾಡಿ ಬಿಲ್ಡಿಂಗ್ ಮೂಲಕ ಲೆಜೆಂಡ್‌ ಎಂದೇ ಗುರುತಿಸಿಕೊಂಡಿದ್ದರು. ಅಲ್ಲದೆ, ತಮ್ಮದೇ ಯುಟ್ಯೂಬ್‌ ಚಾನೆಲ್‌ ಆರಂಭಿಸಿ, ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ಫಿಟ್ನೆಸ್‌ ಟಿಪ್ಸ್‌ ನೀಡುತ್ತಿದ್ದರು.

ತಮ್ಮದೇ ಅಭಿಮಾನಿ ಬಳಗ ಸೃಷ್ಟಿಸಿಕೊಂಡಿದ್ದ ಲಿಂಡ್ನರ್‌ ಯುಟ್ಯೂಬ್‌ನಲ್ಲಿ 940,000 ಚಂದಾದಾರರು ಹಾಗೂ ಇನ್ಸ್ಟಾಗ್ರಾಮ್‌ನಲ್ಲಿ 8.5 ದಶಲಕ್ಷ ಫಾಲೋವರ್ಸ್‌ಗಳನ್ನ ಹೊಂದಿದ್ದರು. ಇವರು ಪ್ರತಿದಿನ ಯುಟ್ಯೂಬ್‌ನಲ್ಲಿ ಫಿಟ್ನೆಸ್‌ ತರಬೇತಿಯ ಜೊತೆಗೆ ಆಹಾರ ಸೇವನೆಯ ಕ್ರಮದ ಬಗ್ಗೆಯೂ ಸಲಹೆ ನೀಡುತ್ತಿದ್ದರು. ಇದರಿಂದ ಥಾಯ್‌ಲ್ಯಾಂಡ್‌ನಲ್ಲಿ ಹೆಚ್ಚು ಪ್ರಸಿದ್ಧರಾಗಿ ಗುರುತಿಸಿಕೊಂಡಿದ್ದರು.

ಇದೀಗ ಜೋ ಲಿಂಡ್ನರ್‌ ರಕ್ತನಾಳ ಸಮಸ್ಯೆಯಿಂದ ಬಳಲುತ್ತಿದ್ದು, ನಿಧನ ಹೊಂದಿದ್ದಾರೆ ಎಂದು ಲಿಂಡ್ನರ್‌ ಗೆಳತಿಯಾದ ನಿಚಾ ಸಾವಿನ ಸುದ್ದಿಯನ್ನು ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಜೋ ಲಿಂಡ್ನರ್ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಫಿಟ್ನೆಸ್‌ ಕುರಿತ ವಿಡಿಯೋ ಹಂಚಿಕೊಂಡಿದ್ದರು ಎಂಬುದಾಗಿ ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದೆ ರಕ್ತನಾಳ ಸಮಸ್ಯೆಯಿಂದ ಬಳಲುತ್ತಿದ್ದ ಲಿಂಡ್ನರ್‌ ಇದೀಗ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಇವರ ಸಾವಿನ ಸುದ್ದಿ ಕೇಳಿದ ಅಭಿಮಾನಿಗಳಿಗೆ ಶಾಕ್ ಆಗಿದೆ. ಬಾಡಿಬಿಲ್ಡಿಂಗ್‌ ಲೋಕದ ಲೆಜೆಂಡ್‌ ಅನ್ನು ನಾವು ಕಳೆದುಕೊಂಡಿದ್ದೇವೆ ಎಂದು ಲಿಂಡ್ನರ್‌ ನ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

- Advertisement -

Related news

error: Content is protected !!