Sunday, September 13, 2026
spot_imgspot_img
spot_imgspot_img

ಭದ್ರಾವತಿ: ಬಾಯ್ಲರ್ ಸ್ಫೋಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ

- Advertisement -
- Advertisement -

ಭದ್ರಾವತಿ: ಭದ್ರಾವತಿಯ ಚನ್ನಗಿರಿ ರಸ್ತೆಯಲ್ಲಿರುವ ರೈಸ್‌ಮಿಲ್‌ನಲ್ಲಿ ಬಾಯ್ಲರ್ ಬ್ಲಾಸ್ಟ್ ಆಗಿದ್ದು 7ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಸ್ಫೋ*ಟದ ತೀವ್ರತೆಗೆ ಇಡೀ ಕಟ್ಟಡ ಕುಸಿದು ಬಿದ್ದಿದ್ದು ಅಪಾರ ಪ್ರಮಾಣದ ಹಾನಿಯಾಗಿದೆ. ಬಾಯ್ಲರ್‌ನ ತುಣುಕುಗಳ ಕಿಲೋ ಮೀಟರ್‌ಗಟ್ಟಲೇ ಪತ್ತೆಯಾಗಿವೆ.ಗುರುವಾರ ಸಂಜೆ ವೇಳೆ ಈ ಘಟನೆ ಸಂಭವಿಸಿದ್ದು ಈ ವೇಳೆ 20ಕ್ಕೂ ಅಧಿಕ ಮಂದಿ ಅಕ್ಕಿ ಲೋಡ್ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಸ್ಫೋಟದ ತೀವ್ರತೆಗೆ ರೈಸ್ ಮಿಲ್ ಕಟ್ಟಡ ಪೂರ್ಣ ಪ್ರಮಾಣದಲ್ಲಿ ಕುಸಿದಿದ್ದು, ಕಬ್ಬಿಣದ ಶೀಟುಗಳು ಹಾರಿಹೋಗಿವೆ. ಘಟನಾ ಸ್ಥಳದಲ್ಲಿ ಒಟ್ಟು ಏಳು ಮಂದಿ ಪತ್ತೆಯಾಗಿದ್ದು ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಬಾಕಿ ಜನರಿಗೆ ಶೋಧ ಕಾರ್ಯ ಮುಂದುವರೆದಿದೆ.ಬಾಯ್ಲರ್‌ನ ತುಣುಕುಗಳು ಅನ್ವರ್ ಕಾಲೋನಿವರೆಗೂ ಹೋಗಿದ್ದು ಸ್ಫೋಟದ ತೀವ್ರತೆ ತೋರಿಸುತ್ತಿದೆ. ಇದರಿಂದ ಹಲವು ಮನೆಗಳಿಗೆ ಹಾನಿಯಾಗಿದ್ದು ಪೊಲೀಸ್ , ಅಗ್ನಿಶಾಮಕ ದಳ ರಕ್ಷಣ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

- Advertisement -

Related news

error: Content is protected !!