ವಿಟ್ಲ: ವಿವಾಹಿತ ಮಹಿಳೆಯ ಮನೆಗೆ ಬಂದ ಯುವಕನೊಬ್ಬ ಆಕೆಯ ಮೈ ಮೇಲೆ ಕೈ ಹಾಕಿ ಮಾನಭಂಗಕ್ಕೆ ಯತ್ನಿಸಿದ ಘಟನೆ ಬೋಳಂತೂರು ಗ್ರಾಮದಲ್ಲಿ ನಡೆದಿದೆ. ಬೋಳಂತೂರು ಗ್ರಾಮದ ಮದಕ ನಿವಾಸಿ ಸಾಜಿದಾ ಎಂಬವರ ಮೊಬೈಲ್ ಗೆ ಮದಕ ನಿವಾಸಿ ಸಾಧಿಕ್ ಎಂಬಾತ ಮೆಸೇಜ್ ಹಾಗೂ ಕರೆ ಮಾಡಿ ತೊಂದರೆ ಕೊಡುತ್ತಿದ್ದು, ಅವರ ಮಕ್ಕಳು ಮನೆಯಲ್ಲಿ ಮಲಗಿದ್ದ ಸಮಯ ರಾತ್ರಿ 11.30 ಗಂಟೆಗೆ ಆರೋಪಿಯ ಮನೆಯ ಬಾಗಿಲನ್ನು ತಟ್ಟಿದ್ದು, ಮಹಿಳೆ ಬಾಗಿಲನ್ನು ತೆರೆದು ಆರೋಪಿಯನ್ನು ಕಂಡು ಬಾಗಿಲು ಮುಚ್ಚಲು ಪ್ರಯತ್ನಿಸಿದಾಗ ಆರೋಪಿಯು ಬಾಗಿಲನ್ನು ದೂಡಿ ಒಳಬಂದು ಕೈಯಿಂದ ಮಹಿಳೆಯನ್ನು ದೂಡಿಕೊಂಡು ಹೋಗಿ ಮಾನಭಂಗಕ್ಕೆ ಯತ್ನಿಸಿದ್ದಾನೆ.
ಜೋರಾಗಿ ಬೊಬ್ಬೆ ಹೊಡೆದಾಗ ಆರೋಪಿಯು ಮಹಿಳೆಯ ಕೆನ್ನೆಗೆ ಹೊಡೆದು ಈ ವಿಚಾರವನ್ನು ಯಾರಲ್ಲಾದರೂ ಹೇಳಿದರೆ ನಿನ್ನನು ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದಾನೆ ಎಂದು ಸಾಜಿದ ಅವರು ವಿಟ್ಲ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ವಿಟ್ಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.