“ಬೊಳ್ಳಿ ಬೊಲ್ಪು” ಮೋಕೆದ ಕಲಾವಿದೆರ್, ಎರುಂಬು ಅಳಿಕೆ ಇವರ ಅಭಿನಯದ ಮೋಹನದಾಸ್ ರೈ ಎರುಂಬು ಇವರ ಸಾರಥ್ಯದಲ್ಲಿ ನೂತನ ನಾಟಕ “ಮದಿಮೆದ ಇಲ್ಲಡ್” ಇದರ ಮೂಹೂರ್ತ ಕಾರ್ಯಕ್ರಮ ಕೇಪು ಶ್ರೀ ಉಳ್ಳಾಲ್ತಿ ಸನ್ನಿಧಿಯಲ್ಲಿ ಮಾಣಿಲ ಶ್ರೀಗಳ ಉಪಸ್ಥಿತಿಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮತನಾಡಿದ ಮಾಣಿಲ ಶ್ರೀಗಳು ಸಾಮಾಜಿಕ, ಸಾಂಸ್ಕೃತಿಕವಾಗಿ ಸಂಘಟನೆಗೆ ನಾಟಕ ರಂಗದ ಕೊಡುಗೆ ಅಪಾರ. ಈ ನೆಲೆಯಲ್ಲಿ ನಾಟಕ ತಂಡವು ಯಶಸ್ವಿ ಪಡೆಯಲೆಂದು ಶುಭ ಹಾರೈಸಿದರು.
ಪ್ರಸ್ತುತ ನಾಟಕದ ನಿರ್ದೇಶಕರಾಗಿ ಮೋಹನದಾಸ್ ರೈ ಎರುಂಬು, ಸಲಹೆ ಸಹಕಾರದಲ್ಲಿ ಗುಭ್ಯ ಶ್ರೀಧರ ಶೆಟ್ಟಿ ಹಾಗೂ ಆನಂದಶೆಟ್ಟಿ ತಾಳಿಪಡ್ಪು, ಹಾಗೂ ಅಭಿನಯದಲ್ಲಿ ಬಂಗಾರ್ ಪಟ್ಲೆರ್ ಖ್ಯಾತಿಯ ಶ್ರೀನಿವಾಸ್ ಶೆಟ್ಟಿ ಕೊಲ್ಯ, ಲಕ್ಷ್ಮೀಶ ಕುಂಬ್ಳೆ, ದೂಮಣ್ಣ ರೈ, ಅಂತರಾಷ್ಟ್ರೀಯ ಕಲಾ ಸಂಘಟಕ ಮೋಹನದಾಸ್ ರೈ ಎರುಂಬು, ಕೋಟಿಚೆನ್ನಯ ಧಾರವಾಹಿಯ ಕೋಟಿ ನಟ ರಾಜಶೇಖರ ಶೆಟ್ಟಿ ತಾಳಿಪಡ್ಪು, ಪ್ರವೀಣ್ ಶೆಟ್ಟಿ ಎರುಂಬು, ರಂಜಿತ್ ಎಸ್. ಶೆಟ್ಟಿ ಗುಭ್ಯ, ರಾಧಾಕೃಷ್ಣ ಕುಲಾಲ್ ಎರುಂಬು, ಡೀಲಾಕ್ಷಿ ಮೆಣಸಿನಗಂಡಿ, ವಿಜಯಶಂಕರ್ ಆಳ್ವ ಮಿತ್ತಳಿಕೆ, ನವೀನ್ ಕುಲಾಲ್ ಮೂಡಾಯಿಬೆಟ್ಟು, ಡಿ. ಎನ್. ಕೆ. ಉಕ್ಕುಡ, ವಸಂತಿ ಶೆಟ್ಟಿ ಪೆರುವಾಯಿ, ಉಷಾ ಶೆಟ್ಟಿ ಓಡಿಯೂರ್ ಸಹಕರಿಸಲಿದ್ದಾರೆ.
ಈ ಸಂದರ್ಭದಲ್ಲಿ ರಾಜೀವಭಂಡಾರಿ ಕೇಪು, ಬೆಂಗ್ರೋಡಿ ಬಾಲಕೃಷ್ಣ ಶೆಟ್ಟಿ, ಕೃಷ್ಣಯ್ಯ ವಿಟ್ಲ ಅರಮನೆ, ಗುಭ್ಯ ಶ್ರೀಧರ ಶೆಟ್ಟಿ, ದಯಾನಂದ ಶೆಟ್ಟಿ ಉಜಿರೆಮಾರ್, ಲಕ್ಷ್ಮೀಶಭಟ್ ಬೆಂಗ್ರೋಡಿ, ಆನಂದ ಶೆಟ್ಟಿ ತಾಳಿಪಡ್ಪು, ಪ್ರಕಾಶ್ ರೈ ಕಲ್ಲಂಗಳ, ಪೂರ್ಣಿಮಾ ಜಯರಾಮ್ ಬೆಂಗ್ರೋಡಿ, ಸಂತೋಷ್ ಶೆಟ್ಟಿ ಪೆಲತ್ತಡ್ಕ ಸದಾಶಿವ ಅಳಿಕೆ, ವಸಂತ ಕುಲಾಲ್ ಎರುಂಬು, ಮಹೇಶ್ ಅಳಿಕೆ, ಶಾಶ್ವತ್ ಎರುಂಬು, ಮಂಜುನಾಥ ಆಚಾರ್ಯ ಪೆರುವಾಯಿ, ತಾರನಾಥ್ ಕುಕ್ಕೆಬೆಟ್ಟು, ರೂಪೇಶ್ ರೈ ಅಳಿಕೆ ಮತ್ತು ಎಲ್ಲಾ ಕಲಾವಿದರು ಹಾಗೂ ಸ್ಥಳೀಯ ಹಿರಿಯ ಕಲಾಭಿಮಾನಿಗಳು ಉಪಸ್ಥಿತರಿದ್ದರು.
ಯುವ ಪೀಳಿಗೆ ತನ್ನ ಒತ್ತಡ ನಿವಾರಣೆಗೆ ಕೆಟ್ಟ ಹವ್ಯಾಸಕ್ಕೆ ಮೊರೆ ಹೋಗುವುದಕ್ಕೆ ಕಲಾ ಸೇವೆಯಲ್ಲಿ ಬದುಕು ಹಸನಾಗಲೆಂಬ ಉದ್ದೇಶದಿಂದ ತಂಡ ರಚಿಸಿದ್ದೇವೆ, ಆಗಮಿಸಿದವರೆಲ್ಲರ ಶುಭ ಹಾರೈಕೆ ಇರಲಿ ಮತ್ತು ಸರ್ವರಿಗೂ ಧನ್ಯವಾದಗಳು ಎಂದು ನಿರ್ದೇಶಕ ಮೋಹನದಾಸ್ ರೈ ಎರುಂಬು ರವರು ನೂತನ ತಂಡದ ಧ್ಯೇಯೋದ್ದೇಶವನ್ನು ತಿಳಿಸಿದರು. ಹಾಗೇ ಕೆಲವು ಕಲಾ ಪೋಷಕರು ಸ್ಥಳದಲ್ಲೇ ನಾಟಕದ ಮುಂಗಡ ಬುಕಿಂಗ್ ಮಾಡಿದರು.