Sunday, June 14, 2026
spot_imgspot_img
spot_imgspot_img

ಕಲಬುರಗಿ ಏರ್‌ಪೋರ್ಟ್‌ಗೆ ಬಾಂಬ್ ಬೆದರಿಕೆ..!

- Advertisement -
- Advertisement -

ಕಲಬುರಗಿ: ಇಲ್ಲಿನ ಏರ್‌ಪೋರ್ಟ್ ಗೆ ಬಾಂಬ್ ಬೆದರಿಕೆ ಹಾಕಿರುವುದು ಬೆಳಕಿಗೆ ಬಂದಿದೆ.

ಏರ್‌ಪೋರ್ಟ್ ಮೇಲ್ ಐಡಿಗೆ ಅನಾಮಧೇಯ ವ್ಯಕ್ತಿಯಿಂದ ಮೇಲ್ ಬಂದಿದ್ದು, ಏರ್‌ಪೋರ್ಟ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ. ವಿಷಯ ಬಯಲಾಗುತ್ತಿದ್ದಂತೆಯೇ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ, ಪೊಲೀಸರು ದೌಡಾಯಿಸಿದ್ದಾರೆ.

ಬೆದರಿಕೆ ಮೇಲ್‍ನಿಂದಾಗಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಪ್ರಯಾಣಿಕರ ಬ್ಯಾಗ್‍ಗಳ ತಪಾಸಣೆ ನಡೆಸಲಾಗುತ್ತಿದೆ. ಅಲ್ಲದೇ ಏರ್‌ಪೋರ್ಟ್ ನ ಇಂಚಿಂಚು ಸ್ಥಳ ಪರಿಶೀಲನೆ ಪೊಲೀಸರು ನಡೆಸುತ್ತಿದ್ದಾರೆ.

ಕಂದಾಯ ಸಚಿವ ಕೃಷ್ಣೆಬೈರೇಗೌಡ ಸೇರಿ ಹಲವು ಪ್ರಯಾಣಿಕರಿದ್ದ ವಿಮಾನವು ಇಂದು ಬೆಳಗ್ಗೆ 9:20ಕ್ಕೆ ಬೆಂಗಳೂರಿನಿಂದ ಕಲಬುರಗಿ ಏರ್‌ಪೋರ್ಟ್ ಗೆ ಆಗಮಿಸಿದೆ. ಇತ್ತ ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಏರ್‌ಪೋರ್ಟ್ ಸಿಬ್ಬಂದಿ 20 ನಿಮಿಷ ಪ್ಯಾಸೆಂಜರ್ ಗಳನ್ನ ಇಳಿಸಲಿಲ್ಲ. ಏರ್‌ಪೋರ್ಟ್ ತಪಾಸಣೆ ಬಳಿಕವೇ ಅಧಿಕಾರಿಗಳು ಪ್ರಯಾಣಿಕರನ್ನು ಕೆಳಗಿಳಿಸಿದರು.

- Advertisement -

Related news

error: Content is protected !!