Sunday, June 14, 2026
spot_imgspot_img
spot_imgspot_img

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ಅಡಗುತಾಣ ಪತ್ತೆ- 5 ಬಾಂಬ್‌ಗಳು ವಶಕ್ಕೆ

- Advertisement -
- Advertisement -

ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ಭಯೋತ್ಪಾದಕರು ಬಳಸುತ್ತಿದ್ದ ಭೂಗತ ಅಡಗುತಾಣವನ್ನು ಸೇನೆ ಭೇದಿಸಿದ್ದು, 5 ಜೀವಂತ ಬಾಂಬ್ ವಶಕ್ಕೆ ಪಡೆದಿದೆ. ಈ ಮೂಲಕ ಭಾರತೀಯ ಸೇನೆಯು ಅತಿದೊಡ್ಡ ದುರಂತವನ್ನು ತಪ್ಪಿಸಿದೆ.ಭಾನುವಾರ ಸಂಜೆ ಪೂಂಚ್‌ನ ಸುರನ್‌ಕೋಟ್ ಅರಣ್ಯದಲ್ಲಿ ಭಾರತೀಯ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯ ಸಂದರ್ಭದಲ್ಲಿ ಉಗ್ರರ ಅಡಗುತಾಣದಲ್ಲಿ 5 ಸ್ಫೋಟಕಗಳು, ಐಇಡಿಯಿದ್ದ 3 ಟಿಫನ್ ಬಾಕ್ಸ್, 2 ಸ್ಟೀಲ್ ಬಕೆಟ್ ಪತ್ತೆಯಾಗಿವೆ.

ಭದ್ರತಾ ಪಡೆಯು ಅಡಗುತಾಣದಲ್ಲಿ ಪತ್ತೆಯಾದ ಸಂಹವನ ಉಪಕರಣವನ್ನು ವಶಕ್ಕೆ ಪಡೆದಿದೆ. ಕಳೆದ ಕೆಲವು ವರ್ಷಗಳಿಂದ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಮತ್ತು ರಾಜೌರಿ ಭಯೋತ್ಪಾದಕ ಕೇಂದ್ರಬಿಂದುವಾಗಿದೆ.

- Advertisement -

Related news

error: Content is protected !!