- Advertisement -
- Advertisement -



ಪುತ್ತೂರು : ದ.ಕ. ಜಿ. ಪಂ.ಹಿ.ಪ್ರಾ.ಶಾಲೆ ಕೈಕಾರದ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ಬೆಳಕು ಸೇವಾ ಟ್ರಸ್ಟ್ ಪುತ್ತೂರು ವತಿಯಿಂದ ಕೈಕಾರ ಶಾಲೆಯಲ್ಲಿ ನೆರವೇರಿತು.ಶಾಲಾ ಮಕ್ಕಳಿಗೆ ಮುಖ್ಯ ಅತಿಥಿಗಳಾದ ಒಳಮೊಗ್ರು ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ಅವಿನಾಶ್ ಬಿ ಆರ್ ಮತ್ತು ಸಂತೋಷ್ ಕುಮಾರ್ ರೈ ಕೈಕಾರ ಪುಸ್ತಕ ವಿತರಿಸಿದರು.
ಈ ಸಂದರ್ಭದಲ್ಲಿ ಶಾಲಾ ಶತಮಾನೋತ್ಸವ ಸಮಿತಿ ಸಂಚಾಲಕರಾದ ಸೀತಾರಾಮ ರೈ ಕೈಕಾರ, ಶಾರದ ಶೆಟ್ಟಿ, ಎಸ್ ಡಿ ಎಂ ಸಿ ಅಧ್ಯಕ್ಷ ಶಿಲ್ಪಾ ಶೆಟ್ಟಿ ಪನಡ್ಕ, ಶಾಲಾ ಮುಖ್ಯಗುರುಗಳು ರಾಮಣ್ಣ ರೈ,ಚಂದ್ರಹಾಸ ರೈ ಪನಡ್ಕ, ನವೀನ್ ರೈ ಪನಡ್ಕ, ಕಿರಣ್ ರೈ ಪುಂಡಿಕಾಯಿ, ಪ್ರಜ್ವಲ್ ರೈ ತೊಟ್ಲಾ ಪ್ರಮೋದ್ ರೈ ಕೈಕಾರ ಮತ್ತು ಶಾಲಾ ಅಧ್ಯಾಪಕರು ಮತ್ತು ಮಕ್ಕಳ ಪೋಷಕರು ಉಪಸ್ಥಿತರಿದ್ದರು.
- Advertisement -