Friday, June 19, 2026
spot_imgspot_img
spot_imgspot_img

ಕಡೇಶಿವಾಲಯ: ಹಿಂದು ಜಾಗರಣ ವೇದಿಕೆಯ ವತಿಯಿಂದ ಭಾರತ್ ಮಾತಾ ಪೂಜನಾ ಕಾರ್ಯಕ್ರಮ

- Advertisement -
- Advertisement -

ಕಡೇಶಿವಾಲಯ: ಹಿಂದು ಜಾಗರಣ ವೇದಿಕೆ ಕಡೇಶಿವಾಲಯ ವತಿಯಿಂದ ಅಮೈ ಮಾಡತ್ತಾರು ದೈವಸ್ಥಾನದ ಆವರಣದಲ್ಲಿ ಭಾರತ್ ಮಾತಾ ಪೂಜನಾ ನೆರವೇರಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಡೇಶಿವಾಲಯ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ನಾರಾಯಣ್ ನಾಯ್ಕ್ ಸೂರಂಗೊಲು ವಹಿಸಿಕೊಂಡಿದ್ದು ವಿಟ್ಲ ತಾಲೂಕು ಹಿಂಜಾವೇ ಅಧ್ಯಕ್ಷ ಗಣೇಶ್ ಕುಲಾಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಉಪನ್ಯಾಸಕರಾದ ಸಚಿನ್ ಜೈನ್ ಹಳೆಯೂರು ಬೌದ್ದಿಕ್ ನೆರವೇರಿಸಿದರು. ಘಟಕದ ಪ್ರಧಾನ ಕಾರ್ಯದರ್ಶಿ ತಿಲಕ್ ಮುಂಡಾಲ ಸ್ವಾಗತಿಸಿ ದುರ್ಗಾಪ್ರಸಾದ್ ಅಮೈ ವಂದಿಸಿದರು. ಶ್ರುತಿನ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದ್ದರು‌. ಊರ ಹಾಗೂ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

- Advertisement -

Related news

error: Content is protected !!