






ಶ್ರೀ ಜಯದುರ್ಗಾಪರಮೇಶ್ವರಿ ಭಜನಾ ಸಮಿತಿ ಧರ್ಮನಗರ ಇದರ ವತಿಯಿಂದ ಬಾಲಗೋಕುಲದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮವು ಧರ್ಮನಗರದ ಸಮಾಜ ಮಂದಿರದಲ್ಲಿ ನಡೆಯಿತು.

ಕಾರ್ಯಕ್ರಮವು ಶ್ರೀ ಜಯದುರ್ಗಾಪರಮೇಶ್ವರಿ ಭಜನಾ ಸಮಿತಿಯ ಅಧ್ಯಕ್ಷ ನಂದಕುಮಾರ್ ಧರ್ಮನಗರ ಇವರ ಅಧ್ಯಕ್ಷತೆಯಲ್ಲಿ, ಮುಖ್ಯ ಅತಿಥಿಯಾಗಿ ಸ್ಥಳೀಯ ವೈದ್ಯರಾದ ಕೀರ್ತನ್ ಶೆಟ್ಟಿ ಇವರ ಉಪಸ್ಥಿತಿಯಲ್ಲಿ ನಡೆಯಿತು.
ಮುಖ್ಯ ಅಬ್ಯಾಗತರಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಸೇವಾ ಪ್ರಮುಖ ಅಶೋಕ್ ಕೊಣಾಜೆ ಇವರು ಪುಸ್ತಕವನ್ನು ಪಡೆಯುವಂತ ವಿದ್ಯಾರ್ಥಿಗಳು ಸಮಾಜದಲ್ಲಿ ಸುಸಂಸ್ಕೃತ ವ್ಯಕ್ತಿಗಳಾಗಿ ಮುಂದಕ್ಕೆ ಸಮಾಜದ ಸೇವೆಯಲ್ಲಿ ತೊಡಗಿಕೊಳ್ಳಬೇಕು ಎನ್ನುವಂತ ಆಶಯವನ್ನು ವ್ಯಕ್ತಪಡಿಸಿದರು ಹಾಗೂ ಧರ್ಮ ನಗರದ ಭಜನಾ ಸಮಿತಿಯ ಈ ಸೇವಾ ಕಾರ್ಯದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಬಾಲಗೋಕುಲದ ವಿದ್ಯಾರ್ಥಿಗಳು ಸಾಮೂಹಿಕವಾಗಿ ಪ್ರಾರ್ಥನೆಯನ್ನು ಹಾಡಿದರು. ಕುಮಾರಿ ಲಾಸ್ಯ ಇವರು ಅತಿಥಿಗಳನ್ನು ಹಾಗೂ ಬಂದಿರುವ ವಿದ್ಯಾರ್ಥಿಗಳನ್ನು ಪೋಷಕರನ್ನು ಸ್ವಾಗತಿಸಿದರು. ತನ್ವಿ ದಾಸ್ ಧರ್ಮನಗರ ವಂದಣಾರ್ಪಣೆ ಸಲ್ಲಿಸಿದರು, ಕುಮಾರಿ ಜಾಹ್ನವಿ ಕಾರ್ಯಕ್ರಮವನ್ನು ನಿರೂಪಿಸಿದರು.