Friday, June 26, 2026
spot_imgspot_img
spot_imgspot_img

ಬೆಳ್ತಂಗಡಿ ಮಗುವಿನ ಅಪಹರಣ

- Advertisement -
- Advertisement -

ಬೆಳ್ತಂಗಡಿ: ಉಜಿರೆ ರಥಬೀದಿ ಸಮೀಪ ಗುರುವಾರ ಸಂಜೆವೇಳೆ ಆಟವಾಡುತ್ತಿದ್ದ 8 ವರ್ಷದ ಬಾಲಕನನ್ನು ಕಾರಿನಲ್ಲಿ‌ ಬಂದಿದ್ದ ನಾಲ್ವರು ಅಪಹರಿಸಿದ್ದಾರೆ ಎಂಬ ಸುದ್ದಿ ಜನರನ್ನು ಬೆಚ್ಚಿಬೀಳಿಸಿದೆ.

ಉಜಿರೆ ಉದ್ಯಮಿಯೋರ್ವರ ಪುತ್ರ ಆಟವಾಡುತ್ತಿದ್ದ ಸಂದರ್ಭ ಇಂಡಿಕಾ ಕಾರಿನಲ್ಲಿ ಬಂದಿದ್ದರೆನ್ನಲಾದ ನಾಲ್ವರು ಕೃತ್ಯವೆಸಗಿದ್ದಾಗಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದೆದ್ದಿದೆ.

ಆಗಂತುಕರು ಕಾರನ್ನು ಚಾರ್ಮಾಡಿ ರಸ್ತೆ ಕಡೆ ತಿರುಗಿಸಿದ್ದಾರೆ ಎಂದು ವಾಟ್ಸ್ ಆಪ್ ನಲ್ಲಿ ಸಂದೇಶ ಹರಿಯಬಿಡಲಾಗಿದ್ದು, ಪೊಲೀಸರು ನಾಕಾಬಂದಿ ಕೈಗೊಂಡಿದ್ದಾರೆ.

ಸಾರ್ವಜನಿಕರೂ ಕೂಡ ಎಚ್ಚೆತ್ತಿದ್ದು ಕೆಲವೆಡೆ ಅವರೂ ಕೂಡ ಪೊಲೀಸರಿಗೆ ಸಹಕಾರಿಯಾಗಿದ್ದಾರೆ.

ಈ ಬಗ್ಗೆ ವಿಚಾರಿಸಿದಾಗ, ಘಟನೆ ನಡೆದಿದೆ
ಅಧಿಕೃತ ದೂರು ಪ್ರಕ್ರಿಯೆ ಆಗಿಲ್ಲ ಎಂದು ಪೊಲೀಸರು
ತಿಳಿಸಿದ್ದಾರೆ.

- Advertisement -

Related news

error: Content is protected !!