- Advertisement -
- Advertisement -




ತಾಯಿ ಜೊತೆಗೆ ಮೊಬೈಲ್ ಅಂಗಡಿಗೆ ಬಂದಿದ್ದ ಪುಟ್ಟ ಕಂದನ ಮೇಲೆ ಲಾರಿ ಹರಿದ ಪರಿಣಾಮ ಮಗುವಿನ ದೇಹ ಛಿದ್ರವಾದ ಘಟನೆ ಬೆಂಗಳೂರು ನಗರದ ರಾಮೋಹಳ್ಳಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಮೃತಪಟ್ಟ ಮಗು ಆಯುಷ್ಯ(4) ಎಂದು ಗುರುತಿಸಲಾಗಿದೆ.
ದಂಪತಿಗೆ ಅವಳಿ-ಜವಳಿ ಮಕ್ಕಳು ಇಬ್ಬರು ಮಕ್ಕಳಲ್ಲಿ ಒಂದು ಮಗು ತಾಯಿಯೊಂದಿಗೆ ಅಂಗಡಿಯಲ್ಲಿತ್ತು. ಆದರೆ ಇನ್ನೊಂದು ಮಗು ಆಯ್ಯುಷ್ ತಾಯಿ ಕೈ ಬಿಡಿಸಿಕೊಂಡು ರಸ್ತೆಗೆ ಓಡಿದ್ಧಾನೆ. ಈ ವೇಳೆ ಬಸ್ ನ್ನು ಓವರ್ ಟೆಕ್ ಮಾಡಲು ಹೋಗಿ ವೇಗವಾಗಿ ಬಂದ ಟಿಪ್ಪರ್ ಲಾರಿ ಚಾಲಕ ಮಗು ಮೇಲೆ ಲಾರಿ ಹತ್ತಿಸಿದ್ದಾನೆ. ತಾಯಿ ಕಣ್ಮುಂದೆ ಮಗು ಸಾವನ್ನಪ್ಪಿದೆ. ಕಂದನ ಸಾವು ಕಂಡು ಪೋಷಕರ ಅಕ್ರಂದನ ಮುಗಿಲುಮುಟ್ಟಿದೆ. ಉತ್ತರ ಭಾರತದಿಂದ ರಾಮೋಹಳ್ಳಿಗೆ ಬಂದು ವೇಂಟಿಂಗ್ ಕೆಲಸ ಮಾಡುತ್ತಿರುವ ಅಮರ್ ಹಾಗೂ ಪೂಜಾ ದಂಪತಿಗಳಿಗೆ ಸೇರಿದ ಮಗು. ಸಂಜೆ 5.30ರ ಸುಮಾರಿಗೆ ನಡೆದಿರುವ ಘಟನೆ.
- Advertisement -