Sunday, June 14, 2026
spot_imgspot_img
spot_imgspot_img

ಬಾಲಕರಿಗೆ ಚಾಕ್ಲೇಟ್‌ ಆಸೆ ತೋರಿಸಿ ಅತ್ಯಾಚಾರ; ವಿಕೃತ ಸಲಿಂಗಕಾಮಿ ಬಂಧನ

- Advertisement -
- Advertisement -

ಕಾಮ ತೃಷೆಗಾಗಿ ಅಪ್ರಾಪ್ತ ಬಾಲಕರೊಂದಿಗೆ ಲೈಂಗಿಕ ಕ್ರಿಯೆ ನಡೆಸಿ, ಅದನ್ನು ವೀಡಿಯೋ ಮಾಡಿಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದ ವಿಕೃತ ಸಲಿಂಗಕಾಮಿ, ಪ್ರತಿಷ್ಠಿತ ಹೋಟೆಲ್ ಕುಕ್‌ನನ್ನು ಸ್ಥಳೀಯರು ಹಿಡಿದು, ಥಳಿಸಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ನಗರದ ಸಿದ್ಧಲಿಂಗೇಶ್ವರ ಕಾಲೋನಿಯಲ್ಲಿ ವಾಸವಿದ್ದ ಒಡಿಶಾ ಮೂಲದ ಕುಕ್, ನಗರದ ಪ್ರತಿಷ್ಠಿತ ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದ. ಸಲಿಂಗಕಾಮಿಯಾಗಿದ್ದ ಈತ ಅಪ್ರಾಪ್ತ ಮಕ್ಕಳನ್ನೇ ಟಾರ್ಗೆಟ್‌ ಮಾಡಿ ಹಣ ಮತ್ತು ಚಾಕ್ಲೇಟ್‌ ಆಸೆ ತೋರಿಸಿ ಲೈಂಗಿಕ ಕ್ರಿಯೆ ನಡೆಸಿ ವೀಡಿಯೋ ಮಾಡ್ತಿದ್ದ. ಬಳಿಕ ಅದೇ ವೀಡಿಯೋ ಇಟ್ಟುಕೊಂಡು ಮಕ್ಕಳಿಗೆ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ.

ಬಳಿಕ ಈತನ ಮೇಲೆ ಅನುಮಾನಗೊಂಡ ಸ್ಥಳೀಯರು ಕುಕ್‌ ಮನೆಗೆ ನುಗ್ಗಿ ಥಳಿಸಿ ಮೊಬೈಲ್‌ ಕಸಿದುಕೊಂಡಿದ್ದಾರೆ. ಮೊಬೈಲ್‌ ಪರಿಶೀಲನೆ ಮಾಡಿದಾಗ ಆತನ ನಿಜಮುಖ ಬಯಲಾಗಿದೆ. ಇದರಿಂದ ಕೋಪಗೊಂಡ ಸ್ಥಳೀಯರು ಆತನಿಗೆ ಮನಬಂದಂತೆ ಥಳಿಸಿ ಹುಬ್ಬಳ್ಳಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ನಗರ ಪೊಲೀಸ್‌ ಠಾಣೆಯಲ್ಲಿ ಕುಕ್‌ನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

- Advertisement -

Related news

error: Content is protected !!