Sunday, April 28, 2024
spot_imgspot_img
spot_imgspot_img

ಇದ್ದಕ್ಕಿದಂತೆ ಬಿಪಿ ಡೌನ್ ಆದರೆ ಏನು ಮಾಡಬೇಕು?

- Advertisement -G L Acharya panikkar
- Advertisement -

ಕ್ತದ ಒತ್ತಡವನ್ನು ಸಹಜ ಸ್ಥಿತಿಯಲ್ಲಿ ನಿರ್ವಹಣೆ ಮಾಡಿಕೊಳ್ಳುವುದು ಒಂದು ರೀತಿಯ ಸವಾಲಿನ ಕೆಲಸವೇ ಸರಿ. ಕಡಿಮೆಯಾದಾಗ ಏನೇನು ಮಾಡಬಹುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.

ಮದ್ಯಪಾನ ಮಾಡುವವರಿಗೆ ಬಿಪಿ ಹೆಚ್ಚಾಗುತ್ತದೆ ಎಂದು ಕೇಳಿದ್ದೇವೆ. ಹಾಗೆಂದು ರಕ್ತದ ಒತ್ತಡ ಕುಸಿದಾಗ ಆಲ್ಕೋಹಾಲ್ ಕುಡಿಯಬೇಕು ಎಂದಲ್ಲ.
ಏಕೆಂದರೆ ಮಧ್ಯಪಾನ ನಿಮ್ಮ ದೇಹವನ್ನು ನಿರ್ಜಲೀಕರಣ ಮಾಡುತ್ತದೆ ಮತ್ತು ನಿಮ್ಮ ದೇಹದಲ್ಲಿ ನೀರಿನ ಅಂಶ ಇಲ್ಲದಾಗ ರಕ್ತದ ಒತ್ತಡ ಮತ್ತಷ್ಟು ಕುಸಿಯುವಂತಾಗಬಹುದು. ಹೀಗಾಗಿ ಹೆಚ್ಚು ನೀರು ಕುಡಿಯುವುದು ನಿಮ್ಮ ದೇಹದಲ್ಲಿ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ. ರಕ್ತದ ಒತ್ತಡ ನಿಯಂತ್ರಣಕ್ಕೆ ಬರುತ್ತದೆ.​

ಅಧಿಕ ರಕ್ತದ ಒತ್ತಡ ಇದ್ದಾಗ ಯಾವುದೇ ಕಾರಣಕ್ಕೂ ಉಪ್ಪಿನ ಅಂಶವನ್ನು ಸೇವಿಸಬಾರದು. ಏಕೆಂದರೆ ಉಪ್ಪಿನಲ್ಲಿರುವ ಸೋಡಿಯಂ ಪ್ರಮಾಣ ರಕ್ತದ ಒತ್ತಡವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಹಾಗೆಂದು ರಕ್ತದ ಒತ್ತಡ ಕುಸಿದಾಗ ಉಪ್ಪು ತಿನ್ನಬೇಕು ಎಂದಲ್ಲ. ಏಕೆಂದರೆ ಹೆಚ್ಚಿನ ಪ್ರಮಾಣದ ಉಪ್ಪು ನಮ್ಮ ದೇಹದಲ್ಲಿ ಅಂಗಾಂಗಗಳನ್ನು ಸಹ ಹಾನಿ ಮಾಡಬಲ್ಲದು. ಹೀಗಾಗಿ ನೀವು ಸಣ್ಣ ಪ್ರಮಾಣದಲ್ಲಿ ಉಪ್ಪು ಸೇವನೆ ಹೆಚ್ಚಿಸಲು ಮುಂದಾದರೂ ಸಹ ವೈದ್ಯರನ್ನು ಮೊದಲು ಕೇಳಿ.​

ರಕ್ತದ ಒತ್ತಡ ಕಡಿಮೆಯಾದಾಗ ತಲೆಸುತ್ತು ಬರುವುದು ಮತ್ತು ಕಣ್ಣು ಮಂಜಾಗುವುದು ಸಾಮಾನ್ಯವಾಗಿರುತ್ತದೆ. ಹೀಗಾಗಿ ಇಂತಹ ಸಮಯದಲ್ಲಿ ಇದ್ದಕ್ಕಿದ್ದಂತೆ ಎದ್ದು ಹೋಗುವುದು ಅಥವಾ ಯಾವುದಾದರೂ ಚಟುವಟಿಕೆಯಲ್ಲಿ ತೊಡಗಿ ಕೊಳ್ಳುವುದು ನಿಮಗೆ ಮತ್ತಷ್ಟು ತೊಂದರೆ ತಂದುಕೊಡಬಹುದು.
ಹೀಗಾಗಿ ಮೊದಲು ನಿಮ್ಮ ಪಾದಗಳನ್ನು ಮತ್ತು ಕಾಲುಗಳನ್ನು ಹಿಸುಕಿಕೊಂಡು ನಿಂತುಕೊಳ್ಳಿ. ಒಂದು ವೇಳೆ ನೀವು ಈಗಾಗಲೇ ಹಾಸಿಗೆಯಲ್ಲಿ ಮಲಗಿದ್ದರೆ ನಿಮ್ಮ ಪಕ್ಕದಿಂದ ಎದ್ದು ಸ್ವಲ್ಪ ಹೊತ್ತು ಕುಳಿತುಕೊಳ್ಳಿ ಆನಂತರ ಎದ್ದೇಳಿ.​

ಹೆಚ್ಚಿನ ಕಾರ್ಬೊಹೈಡ್ರೇಟ್ ಇರುವ ಆಹಾರಗಳು ನಿಮ್ಮ ರಕ್ತದ ಒತ್ತಡ ಕಡಿಮೆಯಾದ ಸಂದರ್ಭದಲ್ಲಿ ಸೇವನೆಗೆ ಅರ್ಹವಲ್ಲ. ಕಾರ್ಬೋ ಹೈಡ್ರೇಡ್ ಆಹಾರಗಳು ಮಧುಮೇಹದ ಜೊತೆ ಸಂಬಂಧ ಹೊಂದಿರುವು ದರಿಂದ ಅದು ಹೃದಯಕ್ಕೆ ನೇರವಾಗಿ ತೊಂದರೆ ಉಂಟಾಗುವಂತೆ ಮಾಡಬಹುದು.ಬಿಪಿ ಕಡಿಮೆಯಾದಂತಹ ಸಂದರ್ಭದಲ್ಲಿ ಬಿಸಿ ನೀರಿನ ಸ್ನಾನ ಅಥವಾ ಸೌನ ಬಾತ್ ಮಾಡಬೇಡಿ. ಏಕೆಂದರೆ ಇದು ತಲೆ ಸುತ್ತು ಮತ್ತಷ್ಟು ಹೆಚ್ಚಾಗುವಂತೆ ಮಾಡಬಹುದು. ಹಾಗೂ ಒಂದು ವೇಳೆ ಸ್ನಾನ ಮಾಡಬೇಕು ಎಂದು ಬಂದರೆ ಸ್ಟೂಲ್ ಮೇಲೆ ಕುಳಿತುಕೊಂಡು ಸ್ವಲ್ಪ ಹೊತ್ತು ರಿಲ್ಯಾಕ್ಸ್ ಮಾಡಿ ಆನಂತರ ಊರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ. ಸ್ಟೂಲ್ ನಿಂದ ಎದ್ದೇಳುವ ಮುಂಚೆ ನಿಮ್ಮ ಪಾದಗಳನ್ನು ಚೆನ್ನಾಗಿ ಹಿಸುಕಿ ಆನಂತರ ಎದ್ದೇಳಿ.

ರಕ್ತದ ಒತ್ತಡ ಕಡಿಮೆ ಆಗಿರುವವರು ಒಮ್ಮೆಲೇ ಹೆಚ್ಚಿನ ಆಹಾರ ಸೇವಿಸಲು ಹೋಗಬಾರದು. ಅದರ ಬದಲು ಎರಡು ಗಂಟೆಗಳಿಗೊಮ್ಮೆ ಸಣ್ಣ ಸಣ್ಣ ಪ್ರಮಾಣದಲ್ಲಿ ಆಹಾರ ಸೇವನೆ ಮಾಡಿದರೆ ದೇಹದ ಸುಸ್ತು ಕಡಿಮೆಯಾಗುತ್ತದೆ, ತಲೆಸುತ್ತು ದೂರವಾಗುತ್ತದೆ ಮತ್ತು ರಕ್ತದ ಒತ್ತಡ ಸಹಜ ಸ್ಥಿತಿಗೆ ಮರಳುತ್ತದೆ.

- Advertisement -

Related news

error: Content is protected !!