


ವಿಟ್ಲ: ಲಯನ್ಸ್ ಕ್ಲಬ್ ವಿಟ್ಲ ಸಿಟಿಗೆ ಜಿಲ್ಲಾ 317 ಡಿ ಪ್ರಾಂತೀಯ ||| ಝೋನ್ || ಜಿಲ್ಲಾ ಗವರ್ನರ್ ಭಾರತೀ ಬಿ ಎಂ pmjf-d8 ಭೇಟಿ ನೀಡಿದರು.

ಜಿಲ್ಲಾ ಗವರ್ನರ್ ಭಾರತೀ ಬಿ ಎಂ pmjf-d8 ಇವರು ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಹಾಗೂ ಭ|| ಶ್ರೀ ಚಂದ್ರನಾಥ ಸ್ವಾಮಿ ಬಸದಿಗೆ ಭೇಟಿ ನೀಡಿದರು.

ಬಳಿಕ ಒ ಎ ಕೃಷ್ಣ ರೆಸಿಡೆನ್ಸಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಾರಂಭದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ವಿಟ್ಲ ಸಿಟಿ ಅಧ್ಯಕ್ಷರು ವಸಂತ ಶೆಟ್ಟಿ ಎರ್ಮಿನಿಲೆ ವಹಿಸಿದ್ದರು.ಕ್ಯಾಬಿನೆಟ್ ಸೆಕ್ರೆಟರಿ ಗೀತಾ ರಾವ್, ಪ್ರಾಂತೀಯ ಅಧ್ಯಕ್ಷರು ಆರ್ ಸಿ ಯೂಜಿನ್ ಲೋಬೋ, ವಲಯಾಧ್ಯಕ್ಷ ಸಂದೇಶ್ ಶೆಟ್ಟಿ, ನಿಕಟಪೂರ್ವ ಪ್ರಾಂತೀಯ ಅಧ್ಯಕ್ಷ ಸುದರ್ಶನ್ ಪಡಿಯಾರ್, ಕೋಶಾಧಿಕಾರಿ ದಿನಕರ ಆಳ್ವ, ಕಾರ್ಯದರ್ಶಿ ಶ್ವೇತಾ ರವಿಕುಮಾರ್ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಗವರ್ನರ್ ಭಾರತೀ ಬಿ ಎಂ pmjf-d8 ಶುಭಹಾರೈಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಶೇಖರ ಪರವ, ಗೋಪಾಲ ಜೋಗಿ, ಕಾವ್ಯಶ್ರೀ ಪ್ರಶಸ್ತಿ ಪುರಸ್ಕೃತರು ಸೀತಾಲಕ್ಷ್ಮೀ ವರ್ಮ ವಿಟ್ಲ ಅರಮನೆ, ಕರಾಟೆಪಟು ಮೊಹಮ್ಮದ್ ಗೌದ್, ಉತ್ತಮ ಪ್ರಶಸ್ತಿ ಪುರಸ್ಕೃತ ವಿಠಲ ಪದವಿಪೂರ್ವ ಕಾಲೇಜು ಉಪನ್ಯಾಸಕ ಅಣ್ಣಪ್ಪ ಶಾಸ್ತಾರ, ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ನೆಫೀಸಾ, ಕರಾಟೆಪಟು ಮೊಹಮ್ಮದ್ ರಿಯಾಜ್, ಅಂತರಾಷ್ಟ್ರೀಯ ಹ್ಯಾಂಡ್‌ಬಾಲ್‌ನಲ್ಲಿ ಪ್ರಥಮ ಸ್ಥಾನ ಪಡೆದ ವಿಠಲ ಪದವಿ ಪೂರ್ವ ಕಾಲೇಜಿನ ಪಿ.ಟಿ ಶ್ರೀನಿವಾಸ್ ಮತ್ತು ವಿದ್ಯಾರ್ಥಿಗಳನ್ನು ಹಾಗೂ ರಾಜ್ಯಮಟ್ಟದ ಕಬಡ್ಡಿಯಲ್ಲಿ ಪ್ರಶಸ್ತಿ ಪಡೆದ ವಿಠಲ ಆರ್‌ಎಂಎಸ್‌ಎ ಎಲಿಮೆಂಟರಿ ಶಾಲೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.



ವಿಟ್ಲ ಪಡ್ನೂರು ಗ್ರಾಮದ ಕೊಡಂಗೆ ಮತ್ತು ಪೂಣೆಮಜಲು ಅಂಗನವಾಡಿ ಕೇಂದ್ರಗಳಿಗೆ ಸಂದೇಶ್ ಶೆಟ್ಟಿ ಮತ್ತು ಸುರೇಶ್ ಬನಾರಿಯವರು ಚಯರ್ ವಿತರಿಸಿದರು. ಹಿರಿಯ ನಾಗರಿಕರು ಒ ಎ ಕೃಷ್ಣ ದಂಪತಿಗಳನ್ನು ಹಾಗೂ ಜಿಲ್ಲಾ ಭಾರತೀ ಬಿ ಎಂ pmjf-d8 ಇವರನ್ನು ಸನ್ಮಾನಿಸಲಾಯಿತು. ವಿಟ್ಲ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರು ರವಿಪ್ರಕಾಶ್ ವಿಟ್ಲ ಇವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಬಡವರಿಗೆ ಅಕ್ಕಿ ವಿತರಣೆ, ಬಡ ವಿದ್ಯಾರ್ಥಿಗಳಿಗೆ ಧನ ಸಹಾತ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಅನಿಲ್ ಕುಮಾರ್, ಶ್ರೀಧರ್ ರಾಜ್ ಶೆಟ್ಟಿ ಮತ್ತು ಜ್ಯೋತಿ ಶೆಟ್ಟಿ, ಗೋವರ್ಧನ್ ಶೆಟ್ಟಿ, ವೆಂಕಟೇಶ್ ಹೆಬ್ಬಾರ್, ಮನೋರಂಜನ್ ಕರೈ, ಪ್ರಾಂತೀಯ ಎಲ್ಲಾ ಅಧ್ಯಕ್ಷರು/ಕಾರ್ಯದರ್ಶಿಗಳು, ಸದಸ್ಯರು ಉಪಸ್ಥಿತರಿದ್ದರು. ಉಪಾಧ್ಯಕ್ಷ ಮೋಹನ್ ಕಟ್ಟೆ, ಜಯರಾಮ್ ಬಲ್ಲಾಳ್, ಧರ್ನಪ್ಪ ಗೌಡ, ವಿ ಸೀನ, ನಾಗರಾಜ್, ಕೃಷ್ಣಪ್ಪ ಮೂಲ್ಯ, ಸಾಯಿಗೀತಾ ಪಡಿಯಾರ್, ರಾಘವ ಗೌಡ ಬನ, ಸಹಕರಿಸಿದರು.
ವಸಂತ ಶೆಟ್ಟಿ ಎರ್ಮಿನಿಲೆ ಸ್ವಾಗತಿಸಿ, ಶ್ವೇತಾ ರವಿಕುಮಾರ್ ವಂದಿಸಿದರು. ಒ ಎ ಕೃಷ್ಣ ನೀತಿ ಸಂಹಿತೆ ವಾಚಿಸಿದರು. ಧ್ವಜವಂದನೆ ದಿನಕರ ಆಳ್ವ ವಾಚಿಸಿದರು. ವಿಟ್ಲ ಮಂಗಳೂರು ರಸ್ತೆಯ ಬೊಬ್ಬೆಕೇರಿ ಒ ಎ ಕೃಷ್ಣ ರೆಸಿಡೆನ್ಸಿಯ ಹತ್ತಿರ ಲಯನ್ಸ್ ಕ್ಲಬ್ ವಿಟ್ಲ ಸಿಟಿಯಿಂದ ನಿರ್ಮಿಸಲಾದ ಸಾರ್ವಜನಿಕ ಬಸ್ ತಂಗುದಾಣವನ್ನು ಜಿಲ್ಲಾ ಗವರ್ನರ್ ಭಾರತೀ ಬಿ ಎಂ pmjf-d8 ಉದ್ಘಾಟಿಸಿದರು.