Monday, June 22, 2026
spot_imgspot_img
spot_imgspot_img

ಬ್ರಹ್ಮಾವರ: ತಂದೆಯನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ ಮಗ ಅರೆಸ್ಟ್‌

- Advertisement -
- Advertisement -

ಬ್ರಹ್ಮಾವರ: ಪೆಜಮಂಗೂರಿನ ಮೊಗವೀರಪೇಟೆಯಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ತಂದೆಯನ್ನು ಕತ್ತಿಯಿಂದ ಕಡಿದು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಮಗನನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.

ಆನಂದ ಮರಕಾಲ(50)ಬಂಧಿತ ಆರೋಪಿ. ತಂದೆ ಸಾಧು ಮರಕಾಲ(68) ಹತ್ಯೆಯಾದವರು. ಅ.7ರಂದು ಮಧ್ಯಾಹ್ನ ಮನೆಯಲ್ಲಿ ಮಗ ತಂದೆಯನ್ನು ಕತ್ತಿಯಿಂದ ಕಡಿದು ಪರಾರಿಯಾಗಿದ್ದನು. ತನಿಖಾಧಿಕಾರಿ ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ದಿವಾಕರ್ ಪಿ.ಎಂ. ನೇತೃತ್ವದಲ್ಲಿ ಆರೋಪಿಯನ್ನು ಉಪ್ಪರು ಎಂಬಲ್ಲಿ ಬಂಧಿಸಲಾಗಿದೆ.

ಮನೆಗೆ ಬಂದು ತಂದೆ ಜೊತೆ ಪ್ರತಿಬಾರಿ ಗಲಾಟೆ ಮಾಡುತ್ತಿದ್ದ ಆನಂದ, ಸಾಧು ಅವರನ್ನು ಮನೆಯಿಂದ ಹೊರ ಹಾಕಬೇಕೆಂಬ ಸಂಚು ರೂಪಿಸಿದ್ದ. ಇದೇ ಉದ್ದೇಶದಿಂದ ಆತ ತಂದೆಯನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!