ಬಂಟ್ವಾಳ: ತಲಕಾವೇರಿಯಲ್ಲಿ ಗುಡ್ಡ ಜರಿದು ನಾಪತ್ತೆಯಾದ ನಾಲ್ವರಲ್ಲಿ ಬಂಟ್ವಾಳ ಮೂಲದ ಕಳ್ಳಿಗೆ ಗ್ರಾಮದ ಕನಪಾಡಿ ನಿವಾಸಿ ಎಂದು ಮಾಹಿತಿ ಲಭ್ಯವಾಗಿದೆ.
ರಾಮಕೃಷ್ಣ ರೇಣುಕಾ ಭಟ್ ( ಅಪ್ಪು ಭಟ್ ) ದಂಪತಿ ಯ ಪುತ್ರ ರವಿಕಿರಣ್ (24) ಎಂದು ಹೇಳಲಾಗುತ್ತಿದೆ. ಲಾಕ್ ಡೌನ್ ಬಳಿಕ ಇವರನ್ನು ತಲಕಾವೇರಿಯಲ್ಲಿ ಅಲ್ಲಿನ ಆರ್ಚಕರು ಕರೆದ ಹಿನ್ನೆಲೆಯಲ್ಲಿ ಊರಿಗೆ ಆಗಮಿಸಿದರವರು ವಾಪಾಸು ಹೋಗಿದ್ದರು. ಕಳೆದ ಎರಡು ವರ್ಷಗಳಿಂದ ಅವರು ತಲಕಾವೇರಿಯಲ್ಲಿ ದೇವಸ್ಥಾನದ ಲ್ಲಿ ಅರ್ಚಕರ ಜೊತೆ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಊರಿಗೆ ಆಗಮಿಸಿದವರು ವಾಪಾಸು ಹೋಗಿದ್ದರು.
ಅಪ್ಪಣ್ಣ ಭಟ್ ಅವರಿಗೆ ರವಿಕಿರಣ್ ಹಾಗೂ ಶಶಿಕಿರಣ್ ಎಂಬ ಇಬ್ಬರು ಪುತ್ರರು.
ಇವರಲ್ಲಿ ದೊಡ್ಡ ಮಗ ರವಿಕಿರಣ್ .
ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಇಂದು ಬೆಳಿಗ್ಗೆ ತಲಕಾವೇರಿಯಲ್ಲಿ ಗುಡ್ಡ ಜರಿದು ಬಿದ್ದ ಹಿನ್ನೆಲೆಯಲ್ಲಿ ಆರ್ಚಕರ ಮನೆ ಸಂಪೂರ್ಣ ಜಲಸಮಾದಿಯಾಗಿತ್ತು . ಮನೆಯೊಳಗೆ ಇದ್ದ ಎಲ್ಲರೂ ನಾಪತ್ತೆಯಾಗಿದ್ದರು.
ನಾಪತ್ತೆಯಾದವರಲ್ಲಿ ಬಂಟ್ವಾಳ ಮೂಲದ ರವಿಕಿರಣ್ ಕೂಡ ಒರ್ವರು.