Monday, April 29, 2024
spot_imgspot_img
spot_imgspot_img

ಬಿಎಸ್‌ಡಬ್ಲ್ಯೂಟಿ ’ವರ್ಷದ ವ್ಯಕ್ತಿ’ ಪ್ರಶಸ್ತಿಗೆ ವಿಜಯಲಕ್ಷ್ಮೀ ಶಿಬರೂರು ಆಯ್ಕೆ

- Advertisement -G L Acharya panikkar
- Advertisement -

ಮಂಗಳೂರು: ಭಾರತ್‌ ಸೋಷಿಯಲ್ ವೆಲ್ಫೇರ್ ಟ್ರಸ್ಟ್‌ ಮಂಗಳೂರು (ಬಿಎಸ್‌ಡಬ್ಲ್ಯೂಟಿ) ವತಿಯಿಂದ ನೀಡಲಾಗುವ ’ವರ್ಷದ ವ್ಯಕ್ತಿ’ ಪ್ರಶಸ್ತಿಗೆ ಪತ್ರಕರ್ತೆ ವಿಜಯಲಕ್ಷ್ಮೀ ಶಿಬರೂರು ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 25 ಸಾವಿರ ರೂ. ನಗದು ಮತ್ತು ಪ್ರಶಸ್ತಿ ಪತ್ರ, ಫಲಕ ಮತ್ತು ಸನ್ಮಾನ ಒಳಗೊಂಡಿರುತ್ತದೆ. ದ.30ರಂದು ಮಂಗಳೂರಿನಲ್ಲಿ ಪ್ರಶಸ್ತಿ ಪ್ರಧಾನ ನಡೆಯಲಿದೆ.

ವಿಜಯಲಕ್ಷ್ಮೀ ಶಿಬರೂರು ಅವರು ‘ಜನವಾಹಿನಿ’ ಪತ್ರಿಕೆಯ ಸಂಪಾದಕರಾಗಿ ವೃತ್ತಿ ಜೀವನವನ್ನು ಪ್ರಾರಂಭಿಸಿದ್ದರು. ನಂತರ ಆಕಾಶವಾಣಿ ರೇಡಿಯೋ ಪ್ರಸಾರಕರಾಗಿ ಸೇವೆ ಸಲ್ಲಿಸಿದರು, ಸಂಯುಕ್ತ ಕರ್ನಾಟಕ, ಉತ್ತರ ಕನ್ನಡದಲ್ಲಿ ಹಿರಿಯ ವರದಿಗಾರ್ತಿ ಕಮ್ ಆಂಕರ್ ಆಗಿ ಕೆಲಸ ಮಾಡಿದರು. ಏಷ್ಯಾನೆಟ್ ಗ್ರೂಪ್‌ಗಳ ಸುವರ್ಣ ನ್ಯೂಸ್ 24×7-ಕನ್ನಡ ಸುದ್ದಿ ವಾಹಿನಿಯಲ್ಲಿ ವಿಶೇಷ ತನಿಖಾ ವರದಿಗಾರ್ತಿಯಾಗಿ ಕಾರ್ಯ ನಿರ್ವಹಿಸಿದ್ದು ಇವರು ಪ್ರಸ್ತುತ ವಿಜಯ ಟೈಮ್‌ನಲ್ಲಿ ವ್ಯವಸ್ಕಾಪಕ ನಿರ್ದೇಶಕರಾಗಿದ್ದಾರೆ.

ಜನರ ಸಾಮಾಜಿಕ, ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಯ ಕುರಿತು ಹಲವು ಸಾಕ್ಷ್ಯಚಿತ್ರವನ್ನು ಮಾಡಿದ್ದಾರೆ. 600ಕ್ಕೂ ಹೆಚ್ಚು ಕವರ್ ಸ್ಟೋರಿಗಳನ್ನು ಮಾಡಿದ್ದಾರೆ. ಇವರ ನೇತೃತ್ವದಲ್ಲಿ ಮೂಡಿ ಬರುವ ಕವರ್ ಸ್ಟೋರಿ’ ಕನ್ನಡ ಸುದ್ದಿ ವಾಹಿನಿಗಳಲ್ಲಿ ಒಂದು ಜನಪ್ರಿಯ ಕಾರ್ಯಕ್ರಮವಾಗಿದೆ. ಅನೇಕ ಸಾಮಾಜಿಕ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತದೆ. ನಕಲಿ ಉತ್ಪನ್ನ, ಕಲಬೆರಕೆಯ ಆಹಾರ, ಬಾಲ ಕಾರ್ಮಿಕತೆ, ಮಹಿಳಾ ಹಕ್ಕುಗಳು, ಪರಿಸರ ಶಿಕ್ಷಣ ಇತ್ಯಾದಿ ಸಾಮಾಜಿಕ ಸಮಸ್ಯೆಗಳನ್ನು ಹಾಗೂ ಹಲವಾರು ಹಗರಣಗಳನ್ನು ಬಹಿರಂಗಪಡಿಸಿದ್ದಾರೆ. ಜನರ ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿಸುವ ಪಾರದರ್ಶಕತೆಯಿಂದ ಕೂಡಿದ ನ್ಯಾಯಪೂರ್ಣ ವಾದ ಅವರ ನಿಸ್ವಾರ್ಥ ಜನಪ್ರಿಯ ಮಾಧ್ಯಮ ಸೇವೆಯನ್ನು ಗುರುತಿಸಿ ಬಿಎಸ್‌ಡಬ್ಯೂಟಿ ವರ್ಷದ ವ್ಯಕ್ತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಬಿಎಸ್‌ಡಬ್ಲ್ಯೂಟಿ ಅಧ್ಯಕ್ಷ ಎನ್.ಅಮೀನ್, ಪ್ರಧಾನ ಕಾರ್ಯದರ್ಶಿ ಆಕಿಫ್ ಇಂಜಿನಿಯರ್, ಉಪಾಧ್ಯಕ್ಷ ಅಶ್ರಫ್ ಎಂ.ಸಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!