Saturday, April 27, 2024
spot_imgspot_img
spot_imgspot_img

ಬಜೆಟ್​ನಲ್ಲಿ ರೈತರಿಗೆ ಕೇಂದ್ರದಿಂದ ಶುಭಸುದ್ದಿ!

- Advertisement -G L Acharya panikkar
- Advertisement -

ನವದೆಹಲಿ: ರೈತರ ಆದಾಯ ಐದು ಪಟ್ಟು ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಬದ್ಧ, ಕೃಷಿ ವಲಯ ಚೇತರಿಕಗೆ ಕೇಂದ್ರದಿಂದ ಹೊಸ ಯೋಜನೆ. ಪ್ರಸಕ್ತ ವರ್ಷ ಗೋಧಿ ಖರೀದಿಗೆ 75 ಸಾವಿರ ಕೋಟಿ ರೂ. ವ್ಯಯ. 40 ಲಕ್ಷ ರೈತರಿಗೆ ಇದರ ಲಾಭ ಸಿಕ್ಕಿದೆ. 1.ಲಕ್ಷ 72 ಸಾವಿರ ಕೋಟಿ ರೂ. ಮೊತ್ತದಲ್ಲಿ ಭತ್ತ ಖರೀದಿಗೆ ಕ್ರಮ ಕೈಗೊಳ್ಳಲಾಗುತ್ತದೆ.

ಪಶುಪಾಲನೆ, ಹೈನುಗಾರಿಕೆ ಕುಕ್ಕುಟೋದ್ಯಮಕ್ಕೆ ಅನುದಾನ ಹೆಚ್ಚಳ . 30 ಸಾವಿರ ಕೋಟಿ ರೂ. ಇದ್ದ ಅನುದಾನ 40 ಸಾವಿರ ಕೋಟಿಗೆ ಹೆಚ್ಚಳ ರೈತರ ಸಾಲ ಯೋಜನೆಗೆ 16.5 ಲಕ್ಷ ಕೋಟಿ ರೂ.ನಿಗದಿ ಮಾಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ.

ಬ್ಯಾಂಕ್ ಠೇವಣಿದಾರ ವಿಮೆಗೆ ಹಣದ ಮೊತ್ತ ಏರಿಕೆ 1 ಲಕ್ಷ ರೂ. ನಿಂದ 5 ಲಕ್ಷ ರೂ. ವರೆಗೆ ಏರಿಕೆ ಮಾಡಲಾಗಿದೆ. 6 ವರ್ಷಗಳಲ್ಲಿ ವಿದ್ಯುತ್ ಹಲವು ಸುಧಾರಣೆಗಳನ್ನು ತರಲಾಗಿದೆ. 2.8 ಕೋಟಿ ಮನೆಗಳಲ್ಲಿ 6 ವರ್ಷದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಗ್ರಾಹಕರು ಯಾರಿಂದ ಬೇಕಾದರೂ ವಿದ್ಯುತ್ ಖರೀದಿಸಬಹುದು.

ಇನ್ನು ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ 1.18 ಲಕ್ಷ ಕೋಟಿ ರೂ. ಅನುದಾನ, ತಮಿಳುನಾಡಿನಲ್ಲಿ 3,500 ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, ಕೇರಳದಲ್ಲಿ 1,100 ಕಿ.ಮೀ , 55 ಸಾವಿರ ಕೋಟಿ ರೂ. ನೀಡಿಕೆ. ಪಶ್ಚಿಮ ಬಂಗಾಳ್ಲಿ 675 ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ 25 ಸಾವಿರ ಕೋಟಿ ರೂ.ನೀಡಲಾಗುವುದು ಎಂದು ಸೀತಾರಾಮನ್​ ಹೇಳಿದರು.

- Advertisement -

Related news

error: Content is protected !!