Thursday, June 18, 2026
spot_imgspot_img
spot_imgspot_img

ಮದ್ಯಪಾನಕ್ಕೆ ಹಣ ನೀಡದ ಪತ್ನಿಯನ್ನು ಕುಕ್ಕರ್ ನಿಂದ ಹೊಡೆದು ಕೊಲೆಗೈದ ಪತಿ

- Advertisement -
- Advertisement -

ಕೌಸುಂಬಿ: ಮದ್ಯಪಾನಕ್ಕೆ ಹಣ ನೀಡದ ಪತ್ನಿಯನ್ನು ವ್ಯಕ್ತಿಯೊಬ್ಬ ಕುಕ್ಕರ್‌‌‌ನಿಂದ ಹೊಡೆದು ಹತ್ಯೆ ಮಾಡಿದ ಅಮಾನುಷ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಕೌಸಂಬಿ ಜಿಲ್ಲೆಯ ಕುಂದ್ರಾವಿ ಗ್ರಾಮದ ಮದ್ಯವ್ಯಸನಿಯಾಗಿದ್ದ ಪಾಟಾಲಿ ಎಂಬ ವ್ಯಕ್ತಿ ಶುಕ್ರವಾರ ಮದ್ಯಪಾನಕ್ಕಾಗಿ ಪತ್ನಿ ಮೀನಾದೇವಿ (32) ಬಳಿ ಹಣ ಕೇಳಿದ. ಹಣ ನೀಡಲು ನಿರಾಕರಿಸಿದಾಗ ಸಿಟ್ಟಿನಿಂದ ಕುಕ್ಕರ್ ನಿಂದ ಹೊಡೆದಿದ್ದು, ಹೊಡೆತದ ರಭಸಕ್ಕೆ ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಆರೋಪಿ ಪಾಟಾಲಿ ಎಂಬಾತ ತಲೆಮರೆಸಿಕೊಂಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

- Advertisement -

Related news

error: Content is protected !!