Monday, May 20, 2024
spot_imgspot_img
spot_imgspot_img

ಮಂಗಳಕಾರ್ಯವೊಂದು ನಡೆಯಲು ಕೈಸೇರಿಸಿದ ಸಹೃದಯಿ ಬಂಟರು.!

- Advertisement -G L Acharya panikkar
- Advertisement -

“ಸಂಷ್ಟದಲ್ಲಿರುವ ಅಸಾಹಯಕ ಬಂಟ ಕುಟುಂಬವೊಂದಕ್ಕೆ ಆಸರೆಯಾಗೋಣ” ಎನ್ನುವ ಶೀರ್ಷಿಕೆಯ ಸೇವಾಕಾರ್ಯ ಯಶಸ್ಸು ಗೊಂಡ ಬಗ್ಗೆ.!
, ಕಡಬ ತಾಲೂಕು ಕೊಣಾಲು ಗ್ರಾಮದ ಶ್ರೀಮತಿ ಶಾರದಾ ಶೆಟ್ಟಿ ಯವರ ಪುತ್ರಿ ಕು. ಸಮತಾಳ ವಿವಾಹವು ಕುಟುಂಬದ ಅರ್ಥಿಕ ಸಂಕಷ್ಟದಿಂದಾಗಿ ಸಮಸ್ಯೆಯ ಸುಳಿಯಲ್ಲಿ ಸಿಲುಕಿದ ಸಂದರ್ಭದಲ್ಲಿ, ಸಹೃದಯಿ ಬಂಟಬಂಧುಗಳ ಆರ್ಥಿಕ ಸಹಾಯದಿಂದಾಗಿ ಸಂಗ್ರಹವಾದ ರೂ 60,000/-(ರೂಪಾಯಿ 60 ಸಾವಿರ) ಹಸ್ತಾಂತರಿಸುವ ಮೂಲಕ ಮದುವೆ ಮನೆಯಲ್ಲಿ ಸಂಭ್ರಮಕ್ಕೆ ಕಾರಣವಾಗಿರುವುದು ಮಾನವೀಯ ಸ್ಪಂದನೆಗೊಂದು ಸಾರ್ಥಕ ನಿದರ್ಶನವಾಗಿದೆ.

ಪುತ್ತೂರು ತಾಲೂಕು ಬಂಟರ ಸಂಘದ ಮಾರ್ಗದರ್ಶನದಲ್ಲಿ * ನೆಲ್ಯಾಡಿ ವಲಯ ಬಂಟರ ಸಂಘದ ಅಧ್ಯಕ್ಷ, ಪುತ್ತೂರು ತಾಲೂಕು ಬಂಟರ ಸಂಘದ ಕೋಶಾಧಿಕಾರಿ ನಿತ್ಯಾನಂದ ಶೆಟ್ಟಿ ಮನವಳಿಕೆ ಹಾಗೂ ನೆಲ್ಯಾಡಿ ವಲಯದ ಸಂಚಾಲಕ ಸತೀಶ್ ರೈ ಕೊಣಾಲುಗುತ್ತು ಮುಂದಾಳುತ್ವದಲ್ಲಿ ಸಾಮಾಜಿಕ ಜಾಲತಾಣದಲ್ಲಿ ರೂಪುಗೊಂಡು ಚಾಲನೆ ಪಡೆದ ಪುಣ್ಯ ಕಾರ್ಯಕ್ಕೆ ನಿರೀಕ್ಷೆಗೂ ಮೀರಿ ಬೆರಳೆಣಿಕಯ ದಿನಗಳಲ್ಲಿ, ಅದೂ ಈಗಿನ ಪರಿಸ್ಥಿತಿಯಲ್ಲಿ ಸಹೃದಯಿ ಬಂಟ ಬಂಧುಗಳು ಸ್ಪಂದಿಸಿದ , ಆ ಮೂಲಕ ಅಸಾಹಯಕ ಕುಟುಂಬವೊಂದರ ಕಣ್ಣೀರು ಒರೆಸಿದ ಸಾರ್ಥಕತೆ ನಮ್ಮ ನಿಮ್ಮೆಲ್ಲರದಾಯಿತು ಎನ್ನುವ ಭಾವನೆ.

ಈ ಮದುವೆ ಮನೆಯಲ್ಲಿ ಸಂಭ್ರಮಕ್ಕೆ, ಬೂಡಿಯಾರು ರಾಧಾಕೃಷ್ಣ ರೈ, ಅಧ್ಯಕ್ಷರು ಮತ್ತು ಸರ್ವಸದಸ್ಯರು ಬಂಟರ ಸಂಘ ಪುತ್ತೂರು ತಾಲೂಕು ಮತ್ತು ಸರ್ವ ಪದಾಧಿಕಾರಿಗಳು ನೆಲ್ಯಾಡಿ ವಲಯ ಬಂಟರ ಸಂಘ ಉಪಸ್ಥಿತಿ ಇದ್ದರು.

- Advertisement -

Related news

error: Content is protected !!