Saturday, April 27, 2024
spot_imgspot_img
spot_imgspot_img

ಬಸ್​ನಲ್ಲಿ ಬೆಂಕಿ ನಿರೋಧಕ ಸಿಲಿಂಡರ್ ಲಾಕ್ ಓಪನ್ – ಪ್ರಾಣರಕ್ಷಣೆಗಾಗಿ ಹೊರಹಾರಿದ ಪ್ರಯಾಣಿಕರು

- Advertisement -G L Acharya panikkar
- Advertisement -

ಶಿವಮೊಗ್ಗ: ಖಾಸಗಿ ಬಸ್​ನಲ್ಲಿ ಇದ್ದ ಬೆಂಕಿ ನಿರೋಧಕ ಸಿಲಿಂಡರ್(ಫೈರ್​​ ಎಕ್ಸ್​​ಟಿಂಗ್ವಿಶರ್) ಲಾಕ್ ಓಪನ್​​ ಆದ ಪರಿಣಾಮ ಬಸ್ಸಿನಲ್ಲಿ ಹೊಗೆ ತುಂಬಿಕೊಂಡಿದ್ದು, ಪ್ರಾಣರಕ್ಷಣೆಗಾಗಿ ಪ್ರಯಾಣಿಕರು ಬಸ್​ನಿಂದ ಹೊರಹಾರಿದ ಘಟನೆ ಸಾಗರ ತಾಲೂಕಿನ ಸಿರಿವಂತೆ ಗ್ರಾಮದ ಬಳಿ ನಡೆದಿದೆ.

ಇದ್ದಕ್ಕಿದ್ದಂತೆ ಖಾಸಗಿ ಬಸ್​ನಲ್ಲಿದ್ದ ಬೆಂಕಿ ನಿರೋಧಕ ಸಿಲಿಂಡರ್​ ಲಾಕ್​ ಓಪನ್​ ಆಗಿದ್ದು ಬಸ್ಸಿನೊಳಗೆ ಹೊಗೆ ತುಂಬಿದೆ. ಇದರಿಂದ ಗಾಬರಿಗೊಂಡ ಪ್ರಯಾಣಿಕರು ಒಬ್ಬೊಬ್ಬರಾಗಿ ಬಸ್ಸಿನಿಂದ ಹೊರಗೆ ಹಾರಿದ್ದಾರೆ. ಈ ವೇಳೆ ಪ್ರಯಾಣಿಕರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು ಸಿರಿವಂತೆ ಎಂಬ ಮಹಿಳೆಗೆ ಗಂಭೀರವಾದ ಗಾಯವಾಗಿದೆ.

ಘಟನೆ ನಡೆದ ಸ್ಥಳಕ್ಕೆ ಅಂಬುಲೆನ್ಸ್​ ಬರದ ಕಾರಣ ಅಲ್ಲಿನ ನಿವಾಸಿಗಳು ಹಾಗೂ ಕಿಂಗ್​ ಹೋಟೆಲ್​ ಮಾಲೀಕ ಜಾವಿದ್​ ರವರು ಗಾಯಾಳುಗಳನ್ನ ಟಾಟಾ ಏಸ್​ ವಾಹನದ ಮುಖಾಂತರ ಸಾಗರದ ಭಗವತ್​ ನರ್ಸಿಂಗ್​ ಹೋಮ್​ಗೆ ದಾಖಲಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಟ್ರೋ ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

Related news

error: Content is protected !!