Tuesday, July 21, 2026
spot_imgspot_img
spot_imgspot_img

ಟೈರ್ ಸ್ಫೋಟಗೊಂಡು 2 ಕಾರಿಗೆ ಡಿಕ್ಕಿ ಹೊಡೆದ ಬಸ್‌; 7 ಮಂದಿ ಮೃತ್ಯು

- Advertisement -
- Advertisement -

ಚೆನ್ನೈ: ಸಾರಿಗೆ ಬಸ್‌ನ ಟೈರ್ ಸ್ಫೋಟಗೊಂಡು 2 ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ 7 ಮಂದಿ ಮೃತಪಟ್ಟ ಘಟನೆ ತಿರುಚಿರಾಪಳ್ಳಿ – ಚೆನ್ನೈ ಹೆದ್ದಾರಿಯಲ್ಲಿ ನಡೆದಿದೆ.

ಬಸ್‌ ತಿರುಚಿರಾಪಳ್ಳಿಯಿಂದ ಚೆನ್ನೈಗೆ ತೆರಳುತ್ತಿತ್ತು. ಈ ವೇಳೆ ತಿತ್ತಕುಡಿ ಸಮೀಪ ಬಸ್‌ನ ಟೈರ್ ಸಿಡಿದು ಚಲಿಸುತ್ತಿದ್ದ ದಿಕ್ಕನ್ನೇ ಬದಲಿಸಿ, ಎರಡು ಕಾರುಗಳಿಗೆ ಡಿಕ್ಕಿಯಾಗಿದೆ. ಪರಿಣಾಮ 7 ಮಂದಿ ಸಾವನ್ನಪ್ಪಿದ್ದಾರೆ.

ಬಸ್‌ ಟೈರ್‌ ಸ್ಫೋಟದಿಂದ ಡಿವೈಡರ್‌ ದಾಟಿ ಎದುರಿನಿಂದ ಬರುತ್ತಿದ್ದ ಕಾರುಗಳಿಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Related news

error: Content is protected !!