ಬೆಳ್ತಂಗಡಿ: ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಇಸ್ಪೀಟು ಎಲೆಗಳಿಂದ ಅಂದರ್-ಬಹಾರ್ ಎಂಬ ಅದೃಷ್ಟದ ಆಟವನ್ನು ಆಡುತ್ತಿದ್ದ ಅಡ್ಡಕ್ಕೆ ಪೊಲೀಸರು ದಾಳಿ ನಡೆಸಿ 23 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದ ಘಟನೆ ಬೆಳ್ತಂಗಡಿ ತಾಲೂಕು ಮಾಲಾಡಿ ಗ್ರಾಮದ, ಮಡಂತ್ಯಾರಿನಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕು ಮಾಲಾಡಿ ಗ್ರಾಮದ ಮಡಂತ್ಯಾರು ಪೇಟೆಯ ಬಳಿಯಿರುವ ಅಲ್ಬರ್ಟ್ ಡಿ ಸೋಜಾ ಎಂಬವರಿಗೆ ಸೇರಿದ ಕಟ್ಟಡದ ಹಿಂಭಾಗದಲ್ಲಿರುವ ಶೆಡ್‌ನೊಳಗೆ ಸುಮಾರು 15-20 ಜನರು ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಇಸ್ಪೀಟು ಎಲೆಗಳಿಂದ ಉಲಾಯಿ –ಪಿದಾಯಿ (ಅಂದರ್-ಬಹಾರ್ ) ಎಂಬ ಅದೃಷ್ಟದ ಆಟವನ್ನು ಆಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ, ಪುಂಜಾಲಕಟ್ಟೆ ಪೊಲೀಸ್ ಠಾಣಾ ಪಿಎಸ್‌ಐ (ಕಾ&ಸು) ನಂದಕುಮಾರ್ ಎಂ.ಎಂ ರವರು ಸಿಬ್ಬಂದಿಗಳೊಂದಿಗೆ ಧಾಳಿ ನಡೆಸಿ ಕೃತ್ಯದಲ್ಲಿ ತೊಡಗಿದ್ದ 23 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು, ಜುಗಾರಿ ಆಟಕ್ಕೆ ಉಪಯೋಗಿಸಿದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ವಶಕ್ಕೆ ಪಡೆದ ನಗದು ಸೇರಿ ಎಲ್ಲಾ ಸೊತ್ತುಗಳ ಅಂದಾಜು ಮೌಲ್ಯ ರೂ 36729/- ಆಗಬಹುದು. ಈ ಬಗ್ಗೆ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದು ದಿನಾಂಕ: 20.09.2024 ರಂದು ಪುಂಜಾಲಕಟ್ಟೆ ಠಾಣೆಯಲ್ಲಿ ಅ.ಕ್ರ 67/2024 ಕಲಂ: 79, 80 ಕರ್ನಾಟಕ ಪೊಲೀಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಮೊನಪ್ಪ ಪೂಜಾರಿ, ಬಿ.ಸಿ ರೋಡ್, ಬಂಟ್ವಾಳ ಜುಗಾರಿ ಕೃತ್ಯವನ್ನು ನಡೆಸುತ್ತಿದ್ದಾತ, ಪರಾರಿಯಾಗಿದ್ದಾನೆ .
ಆರೋಪಿಗಳನ್ನು ಅಬ್ದುಲ್ ಖಾದರ್, , ಕುವೆಟ್ಟು ಬೆಳ್ತಂಗಡಿ, ಮೊಹಮ್ಮದ್ ಹೈದರ್, ಮೂಡುಪಡುಕೋಡಿ ಬಂಟ್ವಾಳ, ಜೋಸ್ ತೋಮಸ್, ಳಿ ಬಂಟ್ವಾಳ. ಅಬೂಬಕ್ಕರ್, ಉ ಜಿರೆ ಬೆಳ್ತಂಗಡಿ.ಲೋಕನಾಥ ಬಂಗೇರ, ತೆಂಕಕಜೆಕಾರು ಬಂಟ್ವಾಳ. ತುಕರಾಮ್, ,ನ್ಯಾಯತರ್ಪು ಬೆಳ್ತಂಗಡಿ. ಅಬ್ದುಲ್ ರಹಿಮಾನ್, ಕುವೆಟ್ಟು ಬೆಳ್ತಂಗಡಿ ಯಶೋಧರ, ಕಾವಳಮೂಡೂರು ಬಂಟ್ವಾಳ, ರಮೇಶ್ ಆಚಾರ್ಯ, ,ಮಾಲಾಡಿ, ಬೆಳ್ತಂಗಡಿ
ಜಿ.ಎ.ದಾವೂದ್, ಪಡಂಗಡಿ ಬೆಳ್ತಂಗಡಿ, ರಿಯಾಜ್ @ ರಿಯಾಜುದ್ದೀನ್ ಲಾಯಿಲ ಬೆಳ್ತಂಗಡಿ. ಮೊಹಮ್ಮದ್, ಪಡಂಗಡಿ ಬೆಳ್ತಂಗಡಿ. ಅಬೂಬಕ್ಕರ್ @ ಗುಜುರಿ ಅಬೂಬಕ್ಕರ್, , ಕುವೆಟ್ಟು ಬೆಳ್ತಂಗಡಿ, ಅಬ್ದುಲ್ ರವೂಫ್,ಲಾಯಿಲ ಬಂಟ್ವಾಳ.
ಮುಸ್ತಾಫ, ಲಾಯಿಲ ಬೆಳ್ತಂಗಡಿ, ಎಂ.ಅಶ್ರಫ್, ಕಾವಳಪಡೂರು ಬಂಟ್ವಾಳ.ರಮೇಶ್.ಕೆ, ಬಜತ್ತೂರು ಪುತ್ತೂರು, ಅಬ್ದುಲ್ ರಝಾಕ್, ಪಡಂಗಡಿ ಬೆಳ್ತಂಗಡಿ., ಕಮಲಾಕ್ಷ ದಾಸ್, ಮಾಲಾಡಿ ಬೆಳ್ತಂಗಡಿ, ವಿಜಯ ಕುಮಾರ್, ಪಡಂಗಡಿ ಬೆಳ್ತಂಗಡಿ
, ಮಜೀದ್ ಯಾನೆ ಅಬ್ದುಲ್ ಮಜೀದ್, ಕುವೆಟ್ಟು ಬೆಳ್ತಂಗಡಿ,ಶ್ರೀಧರ ಪೂಜಾರಿ, ಪೆರ್ನೆ ಬಂಟ್ವಾಳ ,ಮುನ್ನ @ ಮುಸ್ತಾಫ, ನಾವುರ ಬಂಟ್ವಾಳ ಎಂದು ಗುರುತಿಸಲಾಗಿದೆ