- Advertisement -
- Advertisement -





ಬೈಂದೂರು: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಗೆ ಅಮಲುಭರಿತ ಚಾಕೇಟು ನೀಡಿ 4.86 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದು ದೋಚಿರುವ ಘಟನೆ ನಡೆದಿದ್ದು, ಈ ಬಗ್ಗೆ ಬಂಟ್ವಾಳದ ಹರೀಶ್ ಎಂಬವರು ಬೈಂದೂರು ಪೊಲೀಸರಿಗೆ ದೂರು ನೀಡಿದ್ದಾರೆ.
ಆಗಸ್ಟ್ 10ರಂದು ಬಂಟ್ವಾಳದ ಹರೀಶ ಅವರು ಕಾರವಾರದಿಂದ ಮಂಗಳೂರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಭಟ್ಕಳದಲ್ಲಿ ರೈಲು ಏರಿದ ಸುಮಾರು 35 ವರ್ಷದ ಅಪರಿಚಿತ ವ್ಯಕ್ತಿ ತನ್ನ ಪರಿಚಯ ಮಾಡಿಕೊಂಡು ಚಾಕಲೇಟ್ ನೀಡಿದ್ದನು.
ಅದನ್ನು ಸೇವಿಸಿದ ಬಳಿಕ ಗಾಢ ನಿದ್ದೆಗೆ ಜಾರಿದ ಹರೀಶ್ ಬೆಳಗ್ಗೆ ಎದ್ದು ನೋಡುವಾಗ ಕುತ್ತಿಗೆಯಲ್ಲಿದ್ದ ಸುಮಾರು 28 ಗ್ರಾಂ ತೂಕದ 2,35,000 ರೂಪಾಯಿ ಬೆಲೆಬಾಳುವ ಸರ, 8 ಗ್ರಾಂ ತೂಕದ 70,000 ರೂಪಾಯಿ ಬೆಲೆಯ ಉಂಗುರ, ವಾಚ್, ಮೊಬೈಲ್ ಮತ್ತು ಬ್ಯಾಗಿನಲ್ಲಿದ್ದ 1,45,000 ರೂಪಾಯಿ ನಗದು ಸಹಿತ ಒಟ್ಟು 4,86,500 ರೂಪಾಯಿ ಮೌಲ್ಯದ ವಸ್ತುಗಳು ಕಳವಾಗಿದ್ದವು. ಈ ಕುರಿತು ಅವರು ಅಪರಿಚಿತ ವ್ಯಕ್ತಿಯ ವಿರುದ್ಧ ಬೈಂದೂರು ಪೊಲೀಸರಿಗೆ ದೂರು ನೀಡಿದ್ದಾರೆ.
- Advertisement -








