

ಕಂಬಳಬೆಟ್ಟು: ಧರ್ಮನಗರ ವೈದ್ಯನಾಥ ಮಲರಾಯ ಸಪರಿವಾರ ದೈವಗಳ ದೈವಸ್ಥಾನ (ರಿ) ಮಲರಾಯ ಜೇರದಲ್ಲಿ ಕಾರಣಿಕ ಮೆರದ ಶ್ರೀ ದೈವಗಳ ಸಾನಿಧ್ಯವೃದ್ದಿ ಬ್ರಹ್ಮಕಲಶವು ವಿಜೃಂಭಣೆಯಿಂದ ಹಾಗೂ ವೈಭವೋಪೆತವಾಗಿ ನಡೆದಿದೆ.
800 ವರ್ಷಗಳ ಇತಿಹಾಸವಿರುವ ಈ ಕಾರಣಿಕ ಕ್ಷೇತ್ರದ ಬ್ರಹ್ಮಕಲಶದ ಸಂದರ್ಭ ತನು ಮನ ಧನಗಳಾದಿಯಾಗಿ ಶ್ರಮವನ್ನ ಹಾಕಿ ಶಕ್ತಿ ಮೀರಿ ಸೇವೆ ಮಾಡಿದ್ದಾರೆ. ಬ್ರಹ್ಮಕಲಶದ ಸಂದರ್ಭ ಶ್ರೀದೈವಗಳು ಭಕ್ತರ ಮನದ ಅಭಿಲಾಷೆಗಳನ್ನ ಈಡೇರಿಸಿದ್ದು ಮಾತ್ರವಲ್ಲದೆ ಅನ್ನದಾನ,ಧಾರ್ಮಿಕ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಸಾಂಗವಾಗಿ ನಡೆದಿದೆ.
ಈ ಎಲ್ಲ ಕಾರ್ಯಕ್ರಮಗಳ ವಿಮರ್ಶೆಗಾಗಿ, ಮುಂದಿನ ಕಾರ್ಯಕ್ರಮದ ರೂಪುರೇಷೆಗಳಿಗಾಗಿ, ಬ್ರಹ್ಮಕಲಶದ ಸಂದರ್ಭ ಶ್ರೀ ದೈವಗಳ ಸೇವೆ ಮಾಡಿದ ಎಲ್ಲ ಕಾರ್ಯಕರ್ತ ಬಂಧುಗಳ ಅಭಿನಂದನೆಗಾಗಿ, ಬ್ರಹ್ಮಕಲಶ ಜೀರ್ಣೋದ್ಧಾರದ ಒಟ್ಟು ವ್ಯವಸ್ಥೆಯ ಲೆಕ್ಕಪತ್ರ ಮಂಡನೆಗಾಗಿ, ಮಾರ್ಚ್ 23, ಆದಿತ್ಯವಾರ ಬೆಳಿಗ್ಗೆ 10 ಗಂಟೆಗೆ ಮಲರಾಯ ಜೇರದಲ್ಲಿ ಮಹಾಸಭೆಯನ್ನು ಕರೆಯಲಾಗಿದೆ.ಈ ಸಭೆಯಲ್ಲಿ ಮೂರು ಗ್ರಾಮದ ಪ್ರತಿ ಮನೆಯ ಸದಸ್ಯರು, ಮಾತೆಯರು, ಮಕ್ಕಳಿಗೆ,ಸಹಕಾರ ನೀಡಿದ ಎಲ್ಲರೂ ಭಾಗವಹಿಸುವಂತೆ ಜೀರ್ಣೋದ್ದಾರ ಮತ್ತು ಬ್ರಹ್ಮಕಲಶೋತ್ಸವ ಸ್ವಾಗತ ಸಮಿತಿಯ ಅಧ್ಯಕ್ಷರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.