Sunday, June 29, 2025
spot_imgspot_img
spot_imgspot_img

ಅಫ್ಘಾನಿಸ್ತಾನದ ಕ್ರಿಕೆಟ್ ಆರಂಭಿಕ ಆಟಗಾರ ಇನ್ನಿಲ್ಲ.

- Advertisement -
- Advertisement -

ಕಾಬೂಲ್: ಅಫ್ಘಾನಿಸ್ತಾನದ ಆರಂಭಿಕ ಕ್ರಿಕೆಟಿಗ ನಜೀಬ್ ತರಕೈ(29) ಅಕ್ಟೋಬರ್ 2ರಂದು ಜಲಾಲಬಾದ್ ನ ಪೂರ್ವ ನಂಗರ್ಹಾರ್ ನಲ್ಲಿ ನಡೆದಿದ್ದ ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡಿರುವ ಇವರು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

 ಈ ಸಂಬಂಧ ಟ್ವೀಟ್ ಮಾಡಿರುವ ಅಪ್ಘಾನಿಸ್ತಾನ ಕ್ರಿಕಟ್ ಮಂಡಳಿ ನಜೀಬ್ ನಿಧನದ ಸುದ್ದಿಯನ್ನು ತಿಳಿಸಿದೆ.
ಶುಕ್ರವಾರ ಅಪ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ ಇಬ್ರಾಹಿಂ ಮೊಹಮ್ಮದ್ ಟ್ವೀಟ್ ಮಾಡಿ, ಜಲಾಲಬಾದ್ ನಲ್ಲಿ ನಡೆದ ಕಾರು ಅಫಗಾತದಲ್ಲಿ ಗಾಯಗೊಂಡಿರುವ ನಜೀಬ್ ಸ್ಥಿತಿ ಗಂಭೀರವಾಗಿದೆ. ಘಟನೆಯಿಂದ ಅವರ ತಲೆಗೆ ಗಂಭೀರ ಗಾಯಗಳಾಗಿದ್ದು, ಕೋಮಾದಲ್ಲಿದ್ದಾರೆ ಎಂದು ತಿಳಿಸಿದ್ದರು
ಒಟ್ಟಿನಲ್ಲಿ ನಜೀಬ್ ಅಕಾಲಿಕ ನಿಧನ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಗೆ ತುಂಬಲಾರದ ನಷ್ಟ ಉಂಟುಮಾಡಿದೆ. ಅಲ್ಲದೆ ಅವರ ಅಭಿಮಾನಿಗಳಿಗೆ ತೀವ್ರ ನೋವುಂಟು ಮಾಡಿದೆ.

ನಜೀಬ್ ಅವರು 2014ರಲ್ಲಿ ಬಾಂಗ್ಲಾದೇಶದಲ್ಲಿ ನಡೆದಿದ್ದ ಟಿ20 ವಿಶ್ವಕಪ್ ನಲ್ಲಿ ನಜೀಬ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. ಅಫ್ಘಾನಿಸ್ತಾನದ ಪರ 12 ಟಿ20 ಮತ್ತು ಅಂತಾರಾಷ್ಟ್ರೀಯ ಏಕದಿನ ಪಂದ್ಯವೊಂದನ್ನು ಆಡಿದ್ದರು.

- Advertisement -

Related news

error: Content is protected !!