Saturday, June 6, 2026
spot_imgspot_img
spot_imgspot_img

ಕಾರು-ಬೈಕ್‌ ನಡುವೆ ಡಿಕ್ಕಿ; ಸವಾರರು ಸ್ಥಳದಲ್ಲೇ ಸಾವು..!

- Advertisement -
- Advertisement -

ಕಾರು ಮತ್ತು ಬೈಕ್‌ ಡಿಕ್ಕಿಯಾಗಿ ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಕಮತಂಪಲ್ಲಿ ಕ್ರಾಸ್‌ನಲ್ಲಿ ಭಾನುವಾರ ನಡೆದಿದೆ.

ಮೃತಪಟ್ಟವರನ್ನು ಶ್ರೀನಿವಾಸಪುರ ತಾಲೂಕಿನ ಬೈರಗಾನಪಲ್ಲಿಯ ಗೋಪಾಲಪ್ಪ(58), ಚಿಂತಾಮಣಿ ತಾಲೂಕಿನ ಕೋನಪಲ್ಲಿ ಗ್ರಾಮದ ವೆಂಕಟೇಶ್ (45) ಎಂದು ಗುರುತಿಸಲಾಗಿದೆ.

ಇವರಿಬ್ಬರೂ ಬಾವ-ಬಾಮೈದ ಆಗಿದ್ದು, ಬೆಂಗಳೂರು-ಕಡಪ ರಸ್ತೆಯ ತಾಡಿಗೋಲ್ ಕ್ರಾಸ್ ಸಮೀಪದ ಕಮತಂಪಲ್ಲಿ ಕ್ರಾಸ್‌ನಲ್ಲಿ ಹೋಗುತ್ತಿದ್ದಾಗ ಬೈಕ್‌ ಹಾಗೂ ಕಾರಿನ ನಡುವೆ ಅಪಘಾತ ನಡೆದಿದೆ. ಅಪಘಾತ ನಡೆದ ವೇಳೆ ರಸ್ತೆಯಿಂದ ಸುಮಾರು 15 ಅಡಿಗಳ ಆಳಕ್ಕೆ ಕಾರು ಹಾಗೂ ದ್ವಿಚಕ್ರವಾಹನ ಸಮೇತ ಸವಾರರು ಬಿದ್ದಿದ್ದಾರೆ. ಈ ವೇಳೆ ಬೈಕ್‌ನಲ್ಲಿದ್ದ ಬಾವ-ಬಾಮೈದ ಸ್ಥಳದಲ್ಲಿಯೇ ಮೃತಪಟಿದ್ದಾರೆ.

- Advertisement -

Related news

error: Content is protected !!