Sunday, June 29, 2025
spot_imgspot_img
spot_imgspot_img

ವಿಟ್ಲ: ಒಳಚರಂಡಿ ಅವ್ಯವಸ್ಥೆ; ಚರಂಡಿಗೆ ಬಿದ್ದ ಕಾರು

- Advertisement -
- Advertisement -
vtv vitla

ವಿಟ್ಲ: ಕಾರೊಂದು ಚರಂಡಿಗೆ ಬಿದ್ದ ಘಟನೆ ವಿಟ್ಲದ ಸಂತೆ ಮಾರುಕಟ್ಟೆಯ ತಿರುವು ರಸ್ತೆಯಲ್ಲಿ ನಡೆದಿದೆ.

ರಸ್ತೆಯ ಒಳಚರಂಡಿ ವ್ಯವಸ್ಥೆ ಅಸಮರ್ಪಕ ರೀತಿಯಲ್ಲಿ ಕಾಮಗಾರಿ ನಡೆದಿದೆ. ಈ ಹಿನ್ನಲೆ ಚರಂಡಿಗೆ ಕಾರು ಬಿದ್ದಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಮಾರುತಿ-800 ಕಾರೊಂದು ರಸ್ತೆ ಬದಿಯ ಚರಂಡಿಗೆ ಬಿದ್ದಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ.

ರಸ್ತೆ ಬದಿಯಲ್ಲಿರುವ ಚರಂಡಿಯು ತೆರೆದುಕೊಂಡಿದ್ದು, ಸುಮಾರು ನಾಲ್ಕೈದು ತಿಂಗಳಿಂದ ಸವಾರರು ವಾಹನ ಚಲಾಯಿಸುವಾಗ ಅವರ ಗಮನಕ್ಕೆ ಬಾರದೇ ಇಂತಹ ಘಟನೆಗಳು ನಡೆಯುತ್ತಿವೆ. ಇದಕ್ಕೆ ಸಂಬಂಧಪಟ್ಟಂತೆ ಪಟ್ಟಣ ಪಂಚಾಯತ್‌ ಯಾವುದೇ ಕ್ರಮಕೈಗೊಳ್ಳದೇ ನಿರ್ಲಕ್ಷ್ಯ ತೋರುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

- Advertisement -

Related news

error: Content is protected !!