Friday, March 29, 2024
spot_imgspot_img
spot_imgspot_img

ಮುಲ್ಕಿ: ಗ್ಯಾಸ್ ಟ್ಯಾಂಕರ್‌ಗೆ ಕಾರು ಡಿಕ್ಕಿ; ಗೃಹರಕ್ಷಕ ಸಿಬ್ಬಂದಿಗೆ ಗಂಭೀರ ಗಾಯ

- Advertisement -G L Acharya panikkar
- Advertisement -

ಮುಲ್ಕಿ: ಗ್ಯಾಸ್ ಟ್ಯಾಂಕರ್‌ಗೆ ಕಾರು ಡಿಕ್ಕಿ ಹೊಡೆದು ಗೃಹರಕ್ಷಕ ದಳದ ಸಿಬ್ಬಂದಿಯೊಬ್ಬರು ಗಂಭೀರ ಗಾಯಗೊಂಡ ಘಟನೆ ಉಡುಪಿಯ ಉದ್ಯಾವರದಲ್ಲಿ ನಡೆದಿದೆ.

ಮುಲ್ಕಿ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗೃಹರಕ್ಷಕ ದಳದ ಸಿಬ್ಬಂದಿ ಹೆಚ್.ಜಿ ರಾಕೇಶ್ (27) ಗಂಭೀರವಾಗಿ ಗಾಯಗೊಂಡವರು. ರಾತ್ರಿ ಕೆಲಸ ಮುಗಿಸಿ ಕಾರಿನಲ್ಲಿ ಉಡುಪಿಯತ್ತ ಹಿಂದಿರುಗುತ್ತಿದ್ದ ರಾಕೇಶ್, ಇಂದು ಮುಂಜಾನೆ 5.30 ರ ಸಮಯದಲ್ಲಿ ಉದ್ಯಾವರದ ಬಳಿ ಗ್ಯಾಸ್ ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿದ್ದಾರೆ.

ಪರಿಣಾಮವಾಗಿ ರಾಕೇಶ್ ತಲೆ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿದ್ದವು. ಕೂಡಲೇ ಅವರನ್ನು ಅಜ್ಜರಕಾಡು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇದೀಗ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!