Saturday, April 27, 2024
spot_imgspot_img
spot_imgspot_img

ಕಿವಿಯ ಆರೋಗ್ಯದ ಕಾಳಜಿ ಅತ್ಯಗತ್ಯ

- Advertisement -G L Acharya panikkar
- Advertisement -

ಬದುಕಿನಲ್ಲಿ ಆರೋಗ್ಯ ಕಾಳಜಿ ಅತ್ಯಗತ್ಯ. ದೇಹ ಮತ್ತು ಮನಸ್ಸು ಶುಚಿಯಾಗಿದ್ದರೆ ದೈನಂದಿನ ಬದುಕು ತುಂಬಾನೆ ಸೊಗಸಾಗಿರುತ್ತದೆ. ಈ ನಿಟ್ಟಿನಲ್ಲಿ ದೈಹಿಕ ಆರೋಗ್ಯ ಶುಚಿಯಲ್ಲಿ ಅನೇಕರು ಕಿವಿ ಶುಚಿತ್ವಕ್ಕೆ ಕೂಡ ಮಹತ್ವ ನೀಡುತ್ತಾರೆ.

ಶ್ರವಣ ಸರಿಯಾಗಿ ಇಲ್ಲದೆ ಇದ್ದರೆ ಅದು ಜೀವನವನ್ನೇ ನರಕ ಮಾಡಿ ಬಿಡುವುದು. ಹೀಗಾಗಿ ಶ್ರವಣ ದೋಷ ಕಂಡುಬಂದರೆ ಆಗ ಕೂಡಲೇ ವೈದ್ಯರ ಬಳಿಗೆ ಹೋಗಿ ಚಿಕಿತ್ಸೆ ಪಡೆಯಬೇಕು. ಹೆಚ್ಚಾಗಿ ನಮ್ಮ ಕಿವಿಯಲ್ಲಿ ಮೇಣವು ಕಿವಿ ಗುಗ್ಗೆ (ಇಯರ್ ವ್ಯಾಕ್ಸ್) ಉತ್ಪತ್ತಿ ಆಗುತ್ತಲೇ ಇರುವುದು.

ಹಾಗಾದ್ರೆ ಕಿವಿಯನ್ನು ಶುಚಿಗೊಳಿಸುವುದು ಹೇಗೆ ಎನ್ನುತ್ತೀರಾ,…. ಕಿವಿಯು ಸ್ವಯಂ ಶುಚಿಗೊಳಿಸುವ ಕಾರ್ಯವಿಧಾನವನ್ನು ಹೊಂದಿದೆ. ಹೀಗಾಗಿ ಕಿವಿಯಲ್ಲಿರುವ ವ್ಯಾಕ್ಸ್‌ ಕಾಲಕ್ರಮೇಣ ತನ್ನಿಂದ ತಾನೆ ಹೊರಬರುತ್ತದೆ. ಹಾಗಾಗಿ ನಾವು ಪ್ರತಿದಿನ ಕಿವಿಯನ್ನು ಸ್ವಚ್ಛಗೊಳಿಸಬೇಕಾಗಿಲ್ಲ. ಅದಾಗ್ಯೂ ಕಿವಿ ಸ್ವಚ್ಚಗೊಳಿಸಬೇಕೆಂದರೆ ಒಂದು ಮೃದು ಬಟ್ಟೆಯಿಂದ ಸ್ವಚ್ಚಗೊಳಿಸಿದರೆ ಸಾಕು

ಈ ಇಯರ್‌ ವ್ಯಾಕ್ಸ್‌ ತುಂಬಾ ಅಂಟು ಹೊಂದಿರುವುದು ಮತ್ತು ಕಿವಿಯಲ್ಲಿ ಯಾವುದೇ ಸೋಂಕು ಬರದಂತೆ ಹಾಗೂ ಕಿವಿಯ ಸೂಕ್ಷ್ಮ ಭಾಗಗಳಿಗೆ ನೀರು ಹೋಗದಂತೆ ತಡೆಯುವುದು.

ಕಿವಿಯಲ್ಲಿನ ಇಯರ್‌ ವ್ಯಾಕ್ಸ್‌ ಯಾವುದೇ ಹಾನಿ ಉಂಟು ಮಾಡುವುದಿಲ್ಲ. ಆದರೆ ಕೆಲವೊಂದು ಸಲ ಕಿವಿಯ ನೋವು, ಕಿವಿ ಕೇಳಿಸದೆ ಇರುವುದು, ಕಿವಿಯಲ್ಲಿ ಸಿಲುಕಿಕೊಂಡಂತೆ ಆಗುವುದು, ಕಿವಿಯಲ್ಲಿ ಗಂಟೆ ಬಾರಿಸಿದಂತೆ ಆಗುವುದು, ಕಿವಿಯಲ್ಲಿ ತುರಿಕೆ ಮತ್ತು ಕಿವಿ ಸೋರುವಿಕೆಯ ಬಗ್ಗೆ ವೈದ್ಯರನ್ನು ಸಂಪರ್ಕಿಸಬೇಕು.

- Advertisement -

Related news

error: Content is protected !!