Tuesday, June 9, 2026
spot_imgspot_img
spot_imgspot_img

ಲಾರಿಗೆ ಡಿಕ್ಕಿ ಹೊಡೆದ ದಂಪತಿ ಸಂಚರಿಸುತ್ತಿದ್ದ ಬೈಕ್; ಪತಿ ಸಾವು, ಪತ್ನಿಗೆ ಗಾಯ..!

- Advertisement -
- Advertisement -

ಲಾರಿ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ್ದು ಪರಿಣಾಮ ಪತಿ ಸಾವನ್ನಪ್ಪಿದ್ದು ಪತ್ನಿಗಾಯಗೊಂಡಿರುವ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಢೋಗಿ ನಾಲಾ ಬಳಿ‌ ನಡೆದಿದೆ.

ಮೃತಪಟ್ಟ ಬೈಕ್ ಸವಾರ ಅರ್ಜುನ್ (34) ಎಂದು ಗುರುತಿಸಲಾಗಿದೆ.

ಬೈಕ್ ಸವಾರ ಯಾದಗಿರಿ ಜಿಲ್ಲೆಯ ಬಳಿ ಚಕ್ರ ಗ್ರಾಮದ ನಿವಾಸಿಯಾಗಿದ್ದು, ಲಾರಿಗೆ ಡಿಕ್ಕಿಗೆ ಹೊಡೆದ ಪರಿಣಾಮ ಅರ್ಜುನ್​ ಸಾವನ್ನಪ್ಪಿದ್ದಾನೆ. ಅರ್ಜುನ್ ಮತ್ತು ಆತನ ಪತ್ನಿ ಪುಣೆಯಿಂದ ಯಾದಗಿರಿ ಕಡೆ ಬೈಕ್ ಮೇಲೆ ಹೊರಟಿದ್ದರು. ಆದರೆ ಎದುರಿಗೆ ಬಂದ ಲಾರಿಗೆ ದಂಪತಿ ತೆರಳುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ನರೋಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!