Sunday, June 21, 2026
spot_imgspot_img
spot_imgspot_img

ಕೊನೆಯವರೆಗೆ ಸಿಸಿಬಿ ತನಿಖೆಗೆ ಸಹಕರಿಸುತ್ತೇನೆ: ಇಂದ್ರಜಿತ್

- Advertisement -
- Advertisement -

ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಆರೋಪಕ್ಕೆ ಸಂಬಂಧಿಸಿ ಕೊನೆಯವರೆಗೆ ಸಿಸಿಬಿ ತನಿಖೆಗೆ ಸಹಕಾರ ಕೊಡುತ್ತೇನೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ತಿಳಿಸಿದ್ದಾರೆ.

ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಆರೋಪಕ್ಕೆ ಸಂಬಂಧಿಸಿ ದಾಖಲೆ ನೀಡುವಂತೆ ಮತ್ತೆ ವಿಚಾರಣೆಗೆ ಹಾಜರಾಗಲು ಸಿಸಿಬಿ ನೋಟಿಸ್ ನೀಡಿತ್ತು. ಈ ಹಿನ್ನಲೆಯಲ್ಲಿ ಇಂದ್ರಜಿತ್ ವಿಚಾರಣೆಗೆ ಹಾಜರಾಗಿದ್ದಾರೆ.

ಇದಕ್ಕೂ ಮೊದಲು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನನಗೆ ಯಾವುದೇ ಹಿಂಜರಿಕೆ ಇಲ್ಲ. ಕೊನೆಯವರೆಗೆ ತನಿಖೆಗೆ ಸಹಕಾರ ಕೊಡುತ್ತೇನೆ. ಡ್ರಗ್ಸ್ ಅನ್ನೋದು ವರ್ಲ್ಡ್ ಮಾಫಿಯಾ. ಡ್ರಗ್ಸ್, ಸೆಕ್ಸ್, ಮೋಜು ಮಸ್ತಿ ಅನ್ನೋದು ಚಿತ್ರರಂಗವಲ್ಲ. ಬದಲಾಗಿ ಹಲವರ ಹೋರಾಟದ ಫಲ ಕನ್ನಡ ಫಿಲ್ಮ್ ಇಂಡಸ್ಟ್ರಿ. ನಿನ್ನೆ ಮೊನ್ನೆ ಬಂದವರು ಕನ್ನಡ ಇಂಡ್ರಸ್ಟ್ರಿಯನ್ನು ಹಾಳು ಮಾಡಲು ಹೊರಟಿದ್ದಾರೆ ಎಂದು ದೂರಿದರು.

- Advertisement -

Related news

error: Content is protected !!