Tuesday, July 1, 2025
spot_imgspot_img
spot_imgspot_img

ಫೆಬ್ರವರಿ 8ರಿಂದ ಸಿಸಿಎಲ್ 11ನೇ ಸೀಸನ್ ಪ್ರಾರಂಭ

- Advertisement -
- Advertisement -

ಬೆಂಗಳೂರು: ಸಿಸಿಎಲ್ 2025ಕ್ಕೆ ಸ್ಯಾಂಡಲ್​ವುಡ್ ಸ್ಟಾರ್​ಗಳು ರೆಡಿಯಾಗುತ್ತಿದ್ದಾರೆ. ಇದೇ ಫೆಬ್ರವರಿ 8ರಿಂದ ಸಿಸಿಎಲ್ 11ನೇ ಸೀಸನ್ ಪ್ರಾರಂಭ ಆಗಲಿದೆ.

ಮೊದಲ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದೆ. ಕರ್ನಾಟಕ ಬುಲ್ಡೋಜರ್ಸ್ ತಂಡವನ್ನು ಸುದೀಪ್ ಮುನ್ನಡೆಸಲಿದ್ದು, ತಂಡದ ಮಾಲೀಕರಾಗಿ ಅಶೋಕ್ ಖೇಣಿ ಇರಲಿದ್ದಾರೆ. ಕಳೆದ ಬಾರಿ ರನ್ನರ್ ಅಪ್ ಆಗಿ ಹೊರಗಹೊಮ್ಮಿದ್ದ ಕರ್ನಾಟಕ ಬುಲ್ಡೋಜರ್ಸ್ ತಂಡ ಈ ಬಾರಿ ಕಪ್ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ. ಈ ಬಾರಿ ಒಟ್ಟು 7 ತಂಡಗಳು ಸೆಲೆಬ್ರಿಟಿ ಕ್ರಿಕೆಟ್ ಲೀಗ್​ನಲ್ಲಿ ಆಡಲಿವೆ. ಕರ್ನಾಟಕ ಬುಲ್ಡೋಜರ್ಸ್, ಚೆನ್ನೈ ರೈನೋಸ್, ಬೆಂಗಾಲ್ ಟೈಗರ್ಸ್, ಪಂಜಾಬ್ ಡಿ ಶೇರ್, ಮುಂಬೈ ಹೀರೋಸ್, ಭೋಜ್‌ಪುರಿ ದಬಾಂಗ್ಸ್, ತೆಲುಗು ವಾರಿಯರ್ಸ್ ಸೇರಿದಂತೆ 7 ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ.

ಕರ್ನಾಟಕ ಬುಲ್ಡೋಜರ್ಸ್ ತಂಡ ದಲ್ಲಿ ಕಿಚ್ಚ ಸುದೀಪ್ , ಗೋಲ್ಡನ್ ಸ್ಟಾರ್ ಗಣೇಶ್ , ಕಾರ್ತಿಕ್ ಜಯರಾಮ್ , ಡಾರ್ಲಿಂಗ್ ಕೃಷ್ಣ ,ಸುನಿಲ್ ರಾವ್ ,ರಾಜೀವ್ ಹನು ಚಂದನ್ ಕುಮಾರ್ ಪ್ರತಾಪ್ ನಾರಾಯಣ್ ನಿರೂಪ್ ಭಂಡಾರಿ ಅನೂಪ್ ಭಂಡಾರಿ ಕರಣ್ ಆರ್ಯನ್ ಮಂಜುನಾಥ್ ಗೌಡ ಸಾಗರ್ ಗೌಡ ಅಲಕಾನಂದ ತ್ರಿವಿಕ್ರಮ್

ಬೆಂಗಳೂರಿನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ರಿನ್ಹೋಸ್ ಮತ್ತು ಬೆಂಗಾಲ್ ಟೈಗರ್ಸ್ ಮುಖಾಮುಖಿಯಾಗಲಿದ್ದು, ಅದೇ ದಿನ ನಡೆಯುವ ಎರಡನೇ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ಮತ್ತು ತೆಲುಗು ವಾರಿಯರ್ಸ್ ಸೆಣೆಸಲಿವೆ.

- Advertisement -

Related news

error: Content is protected !!