Thursday, June 25, 2026
spot_imgspot_img
spot_imgspot_img

ಪಿ.ಟಿ. ಉಷಾ ದಾಖಲೆ ಮುರಿದ ಕೊಡಗಿನ ಕುವರಿ – ಉನ್ನತಿ ಅಯ್ಯಪ್ಪರಿಂದ ನೂತನ ದಾಖಲೆ !

- Advertisement -
- Advertisement -

ಕೊಡಗು: ‘ಭಾರತದ ವೇಗ’ ಎಂದೇ ಖ್ಯಾತರಾಗಿರುವ ಪಿ.ಟಿ. ಉಷಾರವರ 1979ನೇ ದಾಖಲೆಯನ್ನು ಕೊಡಗಿನ ಅಥ್ಲೆಟ್ ಉನ್ನತಿ ಅಯ್ಯಪ್ಪ ಮುರಿದಿದ್ದಾರೆ.

16ನೇ ವರ್ಷದ ವಿಭಾಗದಲ್ಲಿ ಪಿ.ಟಿ ಉಷಾ 12.2 ಸೆಕೆಂಡ್ ನಲ್ಲಿ ರಾಷ್ಟ್ರೀಯ ದಾಖಲೆ ಮಾಡಿದ್ದರೆ ಉನ್ನತಿ ಅಯ್ಯಪ್ಪ 11.50 ಸೆಕೆಂಡ್ ನಲ್ಲಿ 300 ಮೀಟರ್ ಹರ್ಡಲ್ಸ್ ನಿರ್ಮಿಸಿದ್ದಾರೆ. ಎರಡು ಭಾರಿ ಒಲಂಪಿಯನ್ ಅಥ್ಲೆಟ್ ಪ್ರಮಿಳಾ ಅಯ್ಯಪ್ಪರವರ ಪುತ್ರಿಯಾಗಿರುವ ಉನ್ನತಿ ಗುವಾಹಟಿಯಲ್ಲಿ ನಡೆಯುತ್ತಿರುವ 36ನೇ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಈ ದಾಖಲೆ ನಿರ್ಮಿಸಿದ್ದಾರೆ.

80 ಮೀಟರ್ ಹರ್ಡಲ್ಸ್ ಮತ್ತು 300 ಮೀಟರ್ ಹರ್ಡಲ್ಸ್ ನಲ್ಲಿ ಈ ದಾಖಲೆ ನಿರ್ಮಾಣ ಮಾಡಿದ್ದಾರೆ.
ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದ ಉನ್ನತಿ 80 ಮೀಟರ್ ಹರ್ಡಲ್ಸ್ ನಲ್ಲಿ 11.50 ಸೆಕೆಂಡ್ ನಲ್ಲಿ ಗುರಿ ತಲುಪುವ ಮೂಲಕ ಚಿನ್ನದ ಪದಕ ಗೆದ್ದುಕೊಂಡರು.

- Advertisement -

Related news

error: Content is protected !!