Friday, May 3, 2024
spot_imgspot_img
spot_imgspot_img

ಸಿಇಟಿ ಪರೀಕ್ಷಾ ಫಲಿತಾಂಶ ಪ್ರಕಟ

- Advertisement -G L Acharya panikkar
- Advertisement -

ಬೆಂಗಳೂರು : ರಾಜ್ಯದಲ್ಲಿ ಸಿಇಟಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಆಳ್ವಾಸ್ ಮೂಡಬಿದಿರೆ ಕಾಲೇಜಿನ ವಿದ್ಯಾರ್ಥಿ ಅರ್ನಬ್ ಅಯ್ಯಪ್ಪ ಯೋಗ ಮತ್ತು ನ್ಯಾಚುರೋಪತಿಯಲ್ಲಿ ಆಳ್ವಾಸ್ ಕಾಲೇಜಿನ ಮೊದಲ ರಾಂಕ್ ಪಡೆದುಕೊಂಡಿದ್ದಾರೆ. ಮಾತ್ರವಲ್ಲ ಕೃಷಿ ಕೋರ್ಸ್ ನಲ್ಲಿ 4ನೇ ರಾಂಕ್ ಹಾಗೂ ಬಿ -ಫಾರ್ಮ್ ಹಾಗೂ ಡಿ-ಫಾರ್ಮಾದಲ್ಲಿ 7ನೇ ರಾಂಕ್ ಪಡೆದುಕೊಂಡಿದ್ದಾರೆ.

ಇಂಜಿನಿಯರಿಂಗ್ ಕೋರ್ಸ್ ನಲ್ಲಿ ಬೆಂಗಳೂರಿನ ಆರ್.ವಿ.ಕಾಲೇಜಿನ ರಕ್ಷಿತ್ ಎಂ.ಆರ್. ಮೊದಲ ರಾಂಕ್ ಪಡೆದುಕೊಂಡಿದ್ರೆ, ಶ್ರೀ ಚೈತನ್ಯ ಟೆಕ್ನೋ ಸ್ಕೂಲಿನ ಶುಭನಾ ಎರಡನೇ ರಾಂಕ್ ಹಾಗೂ ಹುಬ್ಬಳ್ಳಿಯ ಬೇಸ್ ಕಾಲೇಝಿನ ಶಶಾಂಕ್ ಬಾಲಾಜಿಗೆ ಮೂರನೇ ರಾಂಕ್ ಲಭಿಸಿದೆ.

ಕೃಷಿ ಕೋರ್ಸ್ ನಲ್ಲಿ ಮಂಗಳೂರಿನ ಎಕ್ಸ್ ಪರ್ಟ್ ಕಾಲೇಜಿನ ವರುಣ್ ಗೌಡ ಎ.ಬಿ ಮೊದಲ ರಾಂಕ್ ಪಡೆದುಕೊಂಡಿದ್ರೆ ಮೈಸೂರಿನ ಬೇಸ್ ಪಿಯು ಕಾಲೇಜಿನ ಸಂಜನಾ ಕೆ. ದ್ವಿತೀಯ ಹಾಗೂ ಮೈಸೂರಿನ ರಾಮಕೃಷ್ಣ ವಿದ್ಯಾಶಾಲಾ ಪಿಯು ಕಾಲೇಜಿನ ಲೋಕೇಶ್ ಬಿ.ಜೋಗಿ ಮೂರನೇ ರಾಂಕ್ ಪಡೆದುಕೊಂಡಿದ್ದಾರೆ.

ಯೋಗ ಮತ್ತು ನ್ಯಾಚುರೋಪತಿಯಲ್ಲಿ ಆಳ್ವಾಸ್ ಮೂಡಬಿದಿರೆ ಕಾಲೇಜಿನ ವಿದ್ಯಾರ್ಥಿ ಅರ್ನಬ್ ಅಯ್ಯಪ್ಪ ಪ್ರಥಮ ರಾಂಕ್, ಬೆಂಗಳೂರಿನ ನಾರಾಯಣ ಇ ಟೆಕ್ನೋ ಸ್ಕೂಲಿನ ಸಾಯಿ ವಿವೇಕ್ ಎರಡನೇ ರಾಂಕ್, ಹೊರ ರಾಜ್ಯದ ವಿದ್ಯಾರ್ಥಿ ಸಂದೀಪನ್ ನಸ್ಕರ್ ಮೂರನೇ ರಾಂಕ್ ಪಡೆದುಕೊಂಡಿದ್ದಾರೆ.

ಬಿ-ಫಾರ್ಮಾ, ಡಿ-ಫಾರ್ಮಾ ಬೆಂಗಳೂರಿನ ನಾರಾಯಣ ಇ ಟೆಕ್ನೋ ಸ್ಕೂಲ್ ನ ಸಾಯಿ ವಿವೇಕ್ ಪ್ರಥಮ, ಹೊರ ರಾಜ್ಯದ ವಿದ್ಯಾರ್ಥಿ ಸಂದೀಪನ್ ದ್ವಿತೀಯ ಹಾಗೂ ನಾರಾಯಣ ಪಿಯು ಕಾಲೇಝಿನ ಪವನ್ ಗೌಡ ಮೂರನೇ ರಾಂಕ್ ಪಡೆದುಕೊಂಡಿದ್ದಾರೆ.


ಈ ಬಾರಿಯ ಸಿಇಟಿ ಪರೀಕ್ಷೆಗೆ ಒಟ್ಟು 1,94,419 ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಿದ್ದ 1,75,349 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು, ಈ ಪೈಕಿ 1,53,470 ವಿದ್ಯಾರ್ಥಿಗಳು ಇಂಜಿನಿಯರಿಂಗ್ ಕೋರ್ಸುಗಳಲ್ಲಿ ರಾಂಕ್ ಪಡೆದುಕೊಂಡಿದ್ದಾರೆ.

1,27,627 ವಿದ್ಯಾರ್ಥಿಗಳು ಕೃಷಿ ಕೋರ್ಸ್ ನಲ್ಲಿ 1,29,666 ವಿದ್ಯಾರ್ಥಿಗಳು, ಪಶುವೈದ್ಯಕೀಯ ಕೋರ್ಸಿನಲ್ಲಿ 1,29,611 ವಿದ್ಯಾರ್ಥಿಗಳು, ಯೋಗ ಮತ್ತು ನ್ಯಾಚುರೋಪತಿ ಕೋರ್ಸಿನಲ್ಲಿ ಹಾಗೂ 1,55,552 ವಿದ್ಯಾರ್ಥಿಗಳು ಬಿ ಫಾರ್ಮಾ ಮತ್ತು ಡಿ ಫಾರ್ಮಾ ಕೋರ್ಸಿನಲ್ಲಿ ರಾಂಕ್ ಪಡೆದುಕೊಂಡಿದ್ದಾರೆ. ಸಿಇಟಿ ಪರೀಕ್ಷೆಗೆ ಒಟ್ಟು 96,215 ಬಾಲಕರು ಅರ್ಜಿ ಸಲ್ಲಿಸಿದ್ದು, 88,029 ಮಂದಿ ಪರೀಕ್ಷೆಗೆ ಹಾಜರಾಗಿದ್ದಾರೆ. ಇನ್ನು 98,204 ಬಾಲಕರಿಯರ ಪೈಕಿ 87,320 ವಿದ್ಯಾರ್ಥಿನಿಯರು ಸಿಇಟಿ ಪರೀಕ್ಷೆ ಬರೆದಿದ್ದಾರೆ. ರಸಾಯನಶಾಸ್ತ್ರ ಮೂವರು ಹಾಗೂ ಜೀವಶಾಸ್ತ್ರದಲ್ಲಿ 80 ಮಂದಿ 60 ಕ್ಕೆ 60 ಅಂಕ ಗಳಿಸಿದ್ದಾರೆ.

ಕೋವಿಡ್-19 ಸೋಂಕಿನ ನಡುವೆಯೇ ಎಲ್ಲರಿಗೂ ಅನುಕೂಲಕರವಾಗುವಂತೆ ಪರೀಕ್ಷೆ ನಡೆಸಲಾಗಿದೆ. 63 ಸೋಂಕಿತ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಿದ್ದರು. ಕೇವಲ 53 ಸ್ಥಳಗಳಲ್ಲಿ ನಡೆಯುತ್ತಿದ್ದ ಪರೀಕ್ಷೆ ಈ ಬಾರಿ 127 ಸ್ಥಳಗಳ ಒಟ್ಟು, 497 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಯನ್ನು ನಡಸಲಾಗಿತ್ತು.

- Advertisement -

Related news

error: Content is protected !!