- Advertisement -
- Advertisement -
ಪುತ್ತೂರು: ಕೊರೊನಾದಿಂದಾಗಿ ವಿದ್ಯಾರ್ಥಿಗಳ ಕಲಿಕೆಯ ಮೇಲೆ ಹೊಡೆತ ಬೀಳದಂತೆ ನೊಡಿಕೊಳ್ಳಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದಂತೆ ನಡೆಸುವ ಸಿಇಟಿ ಪ್ರವೇಶ ಪರೀಕ್ಷೆಯು ವಿವೇಕಾನಂದ ಪದವಿ ಪೂರ್ವ ಕಾಲೇಜು ಕೇಂದ್ರದಲ್ಲಿ ನಡೆಯಿತು. ಒಟ್ಟು 828 ವಿದ್ಯಾರ್ಥಿಗಳು ನಿಯೋಜನೆಗೊಂಡಿದ್ದು, ಜೀವಶಾಸ್ತ್ರ ವಿಷಯದಲ್ಲಿ 619 ವಿದ್ಯಾರ್ಥಿಗಳು ಮತ್ತು ಗಣಿತ ವಿಷಯದಲ್ಲಿ 732 ವಿದ್ಯಾರ್ಥಿಗಳು ಪರೀಕ್ಷೆ ಬರೆದಿರುತ್ತಾರೆ.
ಪರೀಕ್ಷೆಗಾಗಿ ಎಲ್ಲಾ ತರಗತಿ ಕೊಠಡಿಗಳಿಗೆ, ಹೊರಾಂಗಣಗಳಿಗೆ ಸ್ಯಾನಿಟೈಸರ್‌ನ್ನು ಯಂತ್ರದ ಮೂಲಕ ಸಿಂಪಡಿಸಿ ಶುದ್ಧತೆಗೊಳಿಸುವ ಕಾರ್ಯವನ್ನು ಕೈಗೊಳ್ಳಲಾಗಿತ್ತು.ಅಲ್ಲದೆ ಮಾಸ್ಕ್, ಪ್ರತಿಯೊಬ್ಬ ವಿದ್ಯಾರ್ಥಿಯ ದೇಹದ ಉಷ್ಣತೆಯನ್ನು ತೋರಿಸುವ ಥರ್ಮೋಮೀಟರ್‌ನ್ನು ಕಾಲೇಜಿನಲ್ಲಿ ಅಳವಡಿಸಲಾಗಿತ್ತು. ಕೋವಿಡ್ 19ರ ನಿಯಮಗಳನ್ನು ಅನುಸರಿಸಿ ನಡೆಸಿದ ಪರೀಕ್ಷೆಯು ವಿದ್ಯಾರ್ಥಿಗಳ ಸಹಕಾರದೊಂದಿಗೆ ಸರಾಗವಾಗಿ ನಡೆಯಿತು.
- Advertisement -