- Advertisement -
- Advertisement -
ಕೋಲಾರ: ಸರ್ಕಾರಿ ಭೂಮಿ ಒತ್ತುವರಿ ತೆರವು ಮಾಡಲು ಹೋದ ತಹಸೀಲ್ದಾರ್ ಅವರ ಎದೆಗೆ ನಿವೃತ್ತ ಶಿಕ್ಷಕನೊಬ್ಬ ಚಾಕುವಿನಿಂದ ಇರಿದು ಅಮಾನುಷವಾಗಿ ಕೊಂದಿದ್ದಾನೆ.ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕಳವಂಚಿ ಗ್ರಾಮದಲ್ಲಿ ಘಟನೆ,ಬಂಗಾರಪೇಟೆ ತಹಸೀಲ್ದಾರ್ ಚಂದ್ರಮೌಳೇಶ್ವರ ಮೃತಪಟ್ಟವರು. ಆರೋಪಿ, ದೊಡ್ಡಕಳವಂಚಿ ಗ್ರಾಮದ ನಿವೃತ್ತ ಶಿಕ್ಷಕ ವೆಂಕಟಾಚಲಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸೂಕ್ತ ದಾಖಲೆ ತೋರಿಸಿ ಎಂದ ತಹಸೀಲ್ದಾರ್ ಅವರ ಕೈಗೆ ಕೆಲ ಪತ್ರಗಳನ್ನಿಟ್ಟ ವೆಂಕಟಾಚಲಪತಿ, ಜೇಬಿನಿಂದ ಚಾಕು ತೆಗೆದು ತಹಸೀಲ್ದಾರ್ ಅವರ ಎದೆಗೆ ಹಿರಿದಿದ್ದಾನೆ. ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಕುಸಿದುಬಿದ್ದ ಅಧಿಕಾರಿಯನ್ನು ಕೂಡಲೇ ಬಂಗಾರಪೇಟೆ ಆಸ್ಪತ್ರೆಗೆ ಕರೆತರಲಾಯಿತು. ತಹಸೀಲ್ದಾರ್ ಸ್ಥಿತಿ ಗಂಭೀರ ಆಗಿದ್ದರಿಂದ ಕೋಲಾರದ ಆರ್.ಎಲ್ ಜಾಲಪ್ಪ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಷ್ಟರಲ್ಲಿ ಅವರು ಕೊನೆಯುಸಿರು ಎಳೆದಿದ್ದಾರೆ.ಸ್ಥಳಕ್ಕೆ ಭೇಟಿ ನೀಡಿದ ಬಂಗಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
- Advertisement -